Kundapra.com ಕುಂದಾಪ್ರ ಡಾಟ್ ಕಾಂ

ಬೆಂಗಳೂರು: ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯ ‘ಯಕ್ಷಗಾನ ಉತ್ಸವ – 2024’ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು:
ಕರ್ನಾಟಕ ಮಹಿಳಾ ಯಕ್ಷಗಾನ ರಿ. ಬೆಂಗಳೂರು ಸಂಸ್ಥೆಯ ವತಿಯಿಂದ  ‘ಯಕ್ಷಗಾನ ಉತ್ಸವ-2024’  ಕಾರ್ಯಕ್ರಮವು ಬೆಂಗಳೂರಿನ ನಯನ ಸಭಾಂಗಣದಲ್ಲಿ ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು.

ಯಕ್ಷಗಾನ ವೇಷಭೂಷಣ ಹಾಗೂ ಮುಖವರ್ಣಿಕೆ ಕಮ್ಮಟ ಕಾರ್ಯಕ್ರಮವನ್ನು ತುಳುವರೆಂಕುಲು ಕಾರ್ಯದರ್ಶಿ, ಖ್ಯಾತ ಯಕ್ಷಗಾನ ಪ್ರಸಾಧನ ತಜ್ಞರಾದ ಮಟ್ಟಿ ರಾಮಚಂದ್ರ ರಾವ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

ನಂತರ ಸಂಸ್ಥೆಯ ಕಲಾವಿದೆಯರಿಂದ ಯಕ್ಷಗಾನದ  ಕಥಾಭಾಗದ ಮೊದಲು ನಡೆಯುವ ರಂಗಕ್ರಿಯೆಯಾದ ಯಕ್ಷಗಾನ ಪೂರ್ವರಂಗ ಪ್ರದರ್ಶನ, ಕುಶಲವ ಕಾಳಗ, ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರಸಂಗ ಕಾರ್ಯಕ್ರಮ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ನಾವುಡ, ವಿಶ್ವನಾಥ ಶೆಟ್ಟಿ, ವಿನಯ್ ರಾಜೀವ್ ಶೆಟ್ಟಿ, ನರಸಿಂಹ ಆಚಾರ್, ಸಂಪತ್ ಆಚಾರ್ಯ, ಸುಬ್ರಹ್ಮಣ್ಯ ಗಾಣಿಗ ಐರೋಡಿ, ಕಾರ್ತಿಕ್ ಧಾರೇಶ್ವರ್. ಮುಮ್ಮೇಳದಲ್ಲಿ ಕಲಾವಿದೆಯರಾಗಿ ಕೆ. ಗೌರಿ, ಆಶಾ ರಾಘವೇಂದ್ರ, ಅನ್ನಪೂರ್ಣೇಶ್ವರಿ ಕಟೀಲು, ಶ್ವೇತಾ ನವೀನ್, ಲಕ್ಷ್ಮೀ ರಾವ್, ಶಶಿಕಲಾ, ಸುಮಾ ಅನಿಲ್ ಕುಮಾರ್, ಮನಸ್ವಿ, ಚೈತ್ರ ಕೋಟ, ಚೈತ್ರ ಭಟ್, ದೀಕ್ಷಾ ಭಟ್, ಸೌಜನ್ಯ ನಾವುಡ, ರಕ್ಷಾ ಅನಂತ್, ಸಹನಾ ಅನಿಲ್ ಕುಮಾರ್, ಧೃತಿ ಅಮ್ಮೆಂಬಳ, ಸಹನ್ಯ ಚಿನ್ಮಯಿ, ಕೃತಿ ಅಮ್ಮೆಂಬಳ, ಗಗನ ಅನಿಲ್ ಕುಮಾರ್, ಯಾದ್ವಿಯುತಿ, ಸಾನ್ವಿ, ಸಹನಾ, ಶ್ರೀನಿಧಿ, ಮಹಾಲಕ್ಷ್ಮಿ ವಿವಿಧ ಪಾತ್ರಗಳಲ್ಲಿ ಮಿಂಚಿದರು. 

ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಧರಣೀ ದೇವಿ ಮಾಲಗಿತ್ತಿ,  ಅಶ್ವಿನಿ ಆಚಾರ್, ಸಾವಿತ್ರಿ ಶಾಸ್ತ್ರಿ ಅವರ ಅರ್ಥಗಾರಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ- ಶರಸೇತು ಬಂಧ ನಡೆಯಿತು. ತಾಳಮದ್ದಳೆಯಲ್ಲಿ ಹಿಮ್ಮೇಳ ಕಲಾವಿದರಾಗಿ ಅನರ್ಘ್ಯ ಟಿ. ಪಿ, ಪೃಥ್ವಿ ಬಡೆಕ್ಕಿಲ, ಶಿಖಿನ್ ಶರ್ಮ ಭಾಗವಹಿಸಿದರು.

ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಖ್ಯಾತ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ, ಸಂಪನ್ಮೂಲ ವ್ಯಕ್ತಿಗಳಾಗಿ ರಾಜೇಶ್ ಆಚಾರ್, ಶಂಕರ್ ಹೊಸೂರು, ಉಮೇಶ್ ರಾಜ್, ಸಂಸ್ಥೆಯ ಯಕ್ಷಗಾನ ಗುರು ಮತ್ತು ನಿರ್ದೇಶಕರು ಕೆ. ಗೌರಿ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಐ. ಪಿ. ಎಸ್. ಡಾ. ಧರಣೀ ದೇವಿ ಮಾಲಗಿತ್ತಿ, ಗಿರಿನಗರ ಇಂಪಿನ ಗುಂಪು ಇದರ ಸ್ಥಾಪಕ ಅಧ್ಯಕ್ಷರು ಪ್ರೇಮ ಉಪಾಧ್ಯ, ಸುಖಿ ಮಹಿಳಾ ತಂಡದ ಅಧ್ಯಕ್ಷೆ ನಿರ್ಮಲ ಕಾರಂತ್ ಉಪಸ್ಥಿತರಿದ್ದರು.

ಡಾ. ಸುಪ್ರೀತಾ ಗೌತಮ್ ಕಾರ್ಯಕ್ರಮ ಪ್ರಾರ್ಥಿಸಿ,  ಚೈತ್ರ ರಾಜೇಶ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕಿ ಕೆ. ಗೌರಿ ಸ್ವಾಗತಿಸಿ,  ಗೌತಮ್ ಸಾಸ್ತಾನ ಸಹಕರಿಸಿದರು.

Exit mobile version