Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ತಾಲೂಕು ಯುವ ಬಂಟರ ಸಂಘದ ಗೌರವಾಧ್ಯಕ್ಷರಾಗಿ ವತ್ಸಲಾ ದಯಾನಂದ ಶೆಟ್ಟಿ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಯುವ ಬಂಟರ ಸಂಘದ 2024 – 26ನೇ ಸಾಲಿನ ಗೌರವಾಧ್ಯಕ್ಷರಾಗಿ ಅಂಕದಕಟ್ಟೆಯ ಮಂಜುಶ್ರೀ ಕನ್ಸ್ಟ್ರಕ್ಷನ್ ಆಡಳಿತ ಪಾಲುದಾರರಾದ  ವತ್ಸಲಾ ದಯಾನಂದ ಶೆಟ್ಟಿ ಆಯ್ಕೆಯಾಗಿರುತ್ತಾರೆ.

ಕಳೆದ ಹತ್ತು ವರ್ಷಗಳಿಂದ ಯುವ ಬಂಟರ ಸಂಘದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಅವರು ದತ್ತಿನಿಧಿ ಪೋಷಕರಾಗಿ,  ದಶಮಾನೋತ್ಸವದ ಗೌರವ ಮಹಾಪೋಷಕರಾಗಿ, ಪ್ರಸ್ತುತ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Exit mobile version