Kundapra.com ಕುಂದಾಪ್ರ ಡಾಟ್ ಕಾಂ

ದಕ್ಷಿಣ ವಲಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಶಿಖಾಳಿಗೆ ಚಿನ್ನದ ಪದಕ

ಕುಂದಾಪ್ರ‌ ಡಾಟ್ ಕಾಂ ಸುದ್ದಿ.
ಕುಂದಾಪುರ:
ಚೆನ್ನೈನಲ್ಲಿ ನಡೆದ ದಕ್ಷಿಣ ವಲಯ ಕರಾಟೆ ಚಾಂಪಿಯನ್‌ಶಿಪ್‌ -2024ರಲ್ಲಿ ಶಿಖಾ 3 ಸುತ್ತಿನ ಗೆಲುವಿನೊಂದಿಗೆ ಚಿನ್ನದ ಪದಕವನ್ನು ಗಳಿಸಿದ್ದಾಳೆ.

ಕರಾಟೆ ಚಾಂಪಿಯನ್‌ಶಿಪ್‌ -2024ರ ಅಂತಿಮ ಪಂದ್ಯದಲ್ಲಿ 7-0 ಪಾಂಯಿಟ್‌ನೊಂದಿಗೆ ಗೆಲುವು ಸಾಧಿಸಿದ್ದಾರೆ. ಶಿಖಾ ಕರಾಟೆ ತರಬೇತಿಯನ್ನು ಕುಂದಾಪುರದ ಇವೊಲ್ಯೂಷನ್ ಅಕಾಡೆಮಿ ಆಫ್ ಮೆಟೀರಿಯಲ್ ಆರ್ಟ್ಸ್ & ಫಿಟ್‌ನೆಸ್ ಸಂಸ್ಥೆಯಲ್ಲಿ ಗುರು ಗ್ರಷಮೇಶ್ ಕುಂದರ್ ಅವರಿಂದ ತರಬೇತಿ ಪಡೆದಿದ್ದಾಳೆ.

ಬ್ರಹ್ಮಾವರ ಲಿಟಲ್‌ರಾಕ್ ಇಂಡಿಯನ್ ಸ್ಕೂಲ್‌ನ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಶಿಖಾ, ಕುಂದಾಪುರದ ಶ್ರೀದರ್‌ ಬಿಜೂರು ಹಾಗೂ ದೀಪಿಕಾ ಅವರ ದಂಪತಿಯ ಪುತ್ರಿ.

Exit mobile version