Kundapra.com ಕುಂದಾಪ್ರ ಡಾಟ್ ಕಾಂ

ಮತ್ಸ್ಯಸಿರಿ ಮಹಿಳಾ ಮೀನು ಉತ್ಪಾದಕರ ಮತ್ತು ಜನ ಸಂಘದ ಸದಸ್ಯರಿಗೆ ತರಬೇತಿ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮನುವಿಕಾಸ ಸಂಸ್ಥೆ ಶಿರಸಿ ಮತ್ತು ನಬಾರ್ಡ್ ಬೆಂಗಳೂರು ಇವರ ಸಹಯೋಗದಲ್ಲಿ ಸೋಮವಾರದಂದು ಮರವಂತೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಮತ್ಸ್ಯಸಿರಿ ಮಹಿಳಾ ಮೀನು ಉತ್ಪಾದಕರ ಮತ್ತು ಜನ ಸಂಘದ ಆಡಳಿತ ಮಂಡಳಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ಜರುಗಿತು.

ಸಭೆಯಲ್ಲಿ ಮನುವಿಕಾಸ ಸಂಸ್ಥೆ ನಿರ್ದೇಶಕರಾದ ಗಣಪತಿ ಭಟ್, ಮರವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಗೀತಾ, ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೋಕೇಶ್   ಖಾರ್ವಿ,  ಮತ್ಸ್ಯ ಸಂಜೀವಿನಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ಆನಂದ್ ಖಾರ್ವ, ಜೀವನ ಶಿಕ್ಷಣ ತರಬೇತುದಾರರಾದ ರಾಘವೇಂದ್ರ ಆಚಾರ್ಯ ಹಾಗೂ ಮನುವಿಕಾಸ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version