Kundapra.com ಕುಂದಾಪ್ರ ಡಾಟ್ ಕಾಂ

ಆ.25ರಂದು ಶ್ರಾವಣ ಸಂಧ್ಯಾ ಕಾರ್ಯಕ್ರಮ ಮತ್ತು ಸೂರ್ಯ ಸಿದ್ಧಾಂತ ಫೌಂಡೇಶನ್ ದಶಮಾನೋತ್ಸವ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕೆರ್ಗಾಲು ಮಟ್ಟಕಟ್ಟೆ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಮೊಗೇರಿ ಸೂರ್ಯ ಸಿದ್ಧಾಂತ ಫೌಂಡೇಶನ್ ಮತ್ತು ಕುಂದಾಪುರ ದ್ರಾವಿಡ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯ ಇವರ ಸಹಯೋಗದೊಂದಿಗೆ ಶ್ರಾವಣ ಸಂಧ್ಯಾ ಕಾರ್ಯಕ್ರಮ ಮತ್ತು ಸೂರ್ಯ ಸಿದ್ಧಾಂತ ಫೌಂಡೇಶನ್ ದಶಮಾನೋತ್ಸವದ ಆ.25 ರವಿವಾರ ಮಧ್ಯಾಹ್ನ 2.30ರಿಂದ ನಡೆಯಲಿದೆ.

ಸೂರ್ಯ ಸಿದ್ಧಾಂತ ಫೌಂಡೇಶನ್ ನಿರ್ದೇಶಕರಾದ ಉಪ್ಪುಂದ ಚಂದ್ರಶೇಖರ ಹೊಳ್ಳರು ಕಾರ್ಯಕ್ರಮದ ಉದ್ಘಾಟನೆ ನಡೆಸಿ ಆಶೀರ್ವಚನ ನೀಡಲಿದ್ದಾರೆ.

ವಿದ್ವಾನ್ ಭರತ್‌ ಐತಾಳ್ ಅವರು ಪಂಚಾಂಗ ಶ್ರವಣ ಮತ್ತು ಧಾರ್ಮಿಕ ಪ್ರವಚನ ನೆಡೆಸಿಕೊಡುವರು. ಸಭಾಧ್ಯಕ್ಷರಾಗಿ ಯು. ಸಂದೇಶ್ ಭಟ್, ಅಧ್ಯಕ್ಷರು ದ್ರಾವಿಡ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯ, ಮುಖ್ಯ ಅತಿಥಿಗಳಾಗಿ ವರಮಹಾಲಕ್ಷ್ಮಿ ಹೊಳ್ಳ, ಅರುಣ್ ಶಾನುಭೋಗ, ಅನುಪಮ ಅಡಿಗ, ವೀಣಾ ಕೆ. ಹೆಬ್ಬಾರ್ ಭಾಗವಹಿಸುವರು.

ಪರಿಷತ್‌ ಸದಸ್ಯೆಯರಿಂದ ವಿಷ್ಣು ಸಹಸ್ರನಾಮ ಮತ್ತು ಲಲಿತ ಸಹಸ್ರನಾಮ ಪಠಣ ಮತ್ತು ರಕ್ಷಾ ಬಂಧನದ ಕಾರ್ಯಕ್ರಮವಿರುತ್ತದೆ.

ಪರಿಷತ್‌ ಸದಸ್ಯರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಗೌರವ ಅಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು, ಮಹಿಳಾ ಮತ್ತು ಯುವ ವೇದಿಕೆ ದ್ರಾವಿಡ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯ, ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರು ಮಹಾಗಣಪತಿ ದೇವಸ್ಥಾನ ಮಟ್ನಕಟ್ಟೆ , ಪ್ರವರ್ತಕರು, ಸೂರ್ಯ ಸಿದ್ಧಾಂತ ಫೌಂಡೇಶನ್ ಪಂಚಾಂಗ ಮಂದಿರ ಮೊಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Exit mobile version