Kundapra.com ಕುಂದಾಪ್ರ ಡಾಟ್ ಕಾಂ

ಪರಿಷತ್ ಸದಸ್ಯ ಐವನ್ ಡಿ’ಸೋಜ ವಿರುದ್ದ ಪ್ರಕರಣ ದಾಖಲಿಸಲು ಬಿಜೆಪಿ ಯುವ ಮೋರ್ಚಾ ಆಗ್ರಹ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ದೇಶದ ಏಕತೆಗೆ ಧಕ್ಕೆ ಆಗುವಂತೆ ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿದ ರಾಜ್ಯದಲ್ಲಿ ದಂಗೆ ಎಬ್ಬಿಸಲು ಪ್ರೇರೇಪಿಸಿದ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜ ಅವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಅಗ್ರಹಿಸಿ ಕುಂದಾಪುರ ಡಿವೈಎಸ್ಪಿ ಅವರ ಕಛೇರಿಯಲ್ಲಿ ಹಾಗೂ ವೃತ್ತ ನೀರಿಕ್ಷಕರ ಕಛೇರಿ ಬೈಂದೂರಿನಲ್ಲಿ ಬೈಂದೂರು ಮಂಡಲದ ಯುವ ಮೋರ್ಚಾದ ಅಧ್ಯಕ್ಷರಾದ ಗಜೇಂದ್ರ ಎಸ್. ಬೇಲೆಮನೆ ಅವರ ನೇತೃತ್ವದಲ್ಲಿ ದೂರನ್ನು ಕೊಡಲಾಯಿತು.

 ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸದಾನಂದ ಉಪ್ಪಿನಕುದ್ರು, ಕುಂದಾಪುರ ಮಂಡಲದ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಕುಂದಾಪುರ ಮಂಡಲದ ಮಾಜಿ ಅಧ್ಯಕ್ಷರಾದ ಶಂಕರ ಅಂಕದ ಕಟ್ಟೆ, ಬೈಂದೂರು ಬಿಜೆಪಿ ಪ್ರಮುಖರಾದ ಕರಣ್ ಪೂಜಾರಿ,  ತಲ್ಲೂರು  ಪಂಚಾಯತ್ ಅಧ್ಯಕ್ಷರಾದ ಗಿರೀಶ್ ನಾಯ್ಕ್, ಸುರೇಂದ್ರ ಕಾಂಚನ್ ಬೈಂದೂರು ಯುವ ಮೋರ್ಚಾ ಉಪಾಧ್ಯಕ್ಷರಾದ  ಪ್ರದೀಪ್ ಉಪ್ಪುಂದ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಪ್ರಸಾದ್ ಬೈಂದೂರು,  ಕಾರ್ಯದರ್ಶಿಯಾದ ಲಕ್ಷ್ಮಿ ರಾಜ ತಲ್ಲೂರು, ರವೀಂದ್ರ ಶೆಟ್ಟಿ, ರವೀಂದ್ರ ಶೆಟ್ಟಿ ಹೊನ್ನಕೇರಿ, ಗೋಪಾಲ್ ಪೂಜಾರಿ ವಸ್ರೆ, ಗುರುರಾಜ ಕಲ್ಲುಕಂಟ, ಪ್ರಶಾಂತ್ ಪಡುವರಿ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version