Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು: ಸ್ವಯಂಪ್ರೇರಿತ ರಕ್ತದಾನ ಶಿಬಿರ, 101 ಯೂನಿಟ್ ರಕ್ತ ಸಂಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೊಲ್ಲೂರು ಫ್ರೆಂಡ್ಸ್ ಕೊಲ್ಲೂರು ನೇತೃತ್ವದಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಇಂಡಿಯನ್‌ ರೇಡ್‌ ಕ್ರಾರ್ಸ್‌ ಸೊಸೈಟಿ ಕುಂದಾಪುರ ಸಹಯೋಗದಲ್ಲಿ, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ  ಸ್ವಯಂಪ್ರೇರಿತ ರಕ್ತದಾನ ಶಿಬಿರವು ಜರುಗಿತು.

ಕಾರ್ಯಕ್ರಮವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಉದ್ಘಾಟಿಸಿದರು.

ಕೊಲ್ಲೂರು ಫ್ರೆಂಡ್ಸ್ ಸಂದೀಪ್ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಶೇರುಗಾರ್,  ಉಪಾಧ್ಯಕ್ಷ ನಾಗೇಶ್ ದಳಿ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಶೇಖರ್ ಅಡಿಗ,  ಜೀಪು ಚಾಲಕ ಮಾಲಕರ ಸಂಘದ ಅಧ್ಯಕ್ಷ ಕಿಶನ್ ಶೆಟ್ಟಿ, ಟ್ಯಾಕ್ಸಿ ಚಾಲಕ ಮಾಲಕರ ಸಂಘದ ನಾಗೇಶ್ ಬಾಳಿಗ, ಆಟೋ ಚಾಲಕ ಮಾಲಕರ ಸಂಘದ ಸುರೇಶ, ಮಹಿಳಾ ಮಂಡಲದ ಅಧ್ಯಕ್ಷೆ ಲತಾ ಶೆಟ್ಟಿ, ಗ್ರೀಷ್ಮ ಗಿರಿಧರ್ ಭೀಡೆ, ನವಶಕ್ತಿ ಮಹಿಳಾ ವೇದಿಕೆಯ ಅಧ್ಯಕ್ಷೆ ಗ್ರೀಷ್ಮ ಗಿರಿಧರ್ ಭೀಡೆ,  ಡಾ. ಶ್ರೀಕಾಂತ್, ಎಸ್. ಜಯಕರ ಶೆಟ್ಟಿ ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್. ಶರತ್ ಹಾನಗಳ್ಳಿ ಮತ್ತು ಪ್ರಶಾಂತ್ ತಾಲ್ಲೂರು ಅಭಯ ಅಸ್ತ ಚಾರಿಟೇಬಲ್ ಟ್ರಸ್ಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

101 ಯೂನಿಟ್ ರಕ್ತದಾನ ಮಾಡಲಾಯಿತು. ಪವರ್ ಮ್ಯಾನ್ ಗಳಿಗೆ ಹಾಗೂ ಪೌರ ಕಾರ್ಮಿಕರಿಗೆ ಕೊಲ್ಲೂರು ಫ್ರೆಂಡ್ಸ್ ವತಿಯಿಂದ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮಕ್ಕೆ ಬೈಂದೂರು ಶಾಶಕರಾದ ಗುರುರಾಜ್‍ ಗಂಟಿಹೊಳೆ ಭೇಟಿ ನೀಡಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕೊಲ್ಲೂರು ಫ್ರೆಂಡ್ಸ್ ವಿನೋದ್ ಭಟ್ ನಿರೂಪಿಸಿದರು. ಗಿರೀಶ್ ಶೆಟ್ಟಿ ಪ್ರಾಸ್ತವಿಕ ಹಾಗೂ ಧನ್ಯವಾದ ಗೈದರು.

Exit mobile version