Kundapra.com ಕುಂದಾಪ್ರ ಡಾಟ್ ಕಾಂ

ಯೋಗಾಸನ ಚಾಂಪಿಯನ್‍ಶಿಪ್‍ನಲ್ಲಿ ದಿವ್ಯಾ ಶೆಟ್ಟಿಗೆ ಬೆಳ್ಳಿ ಪದಕ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಏಷ್ಯಾನ್ ಫೆಸಿಪಿಕ್ ಯೋಗಾಸನ ಚಾಂಪಿಯನ್‍ಶಿಪ್‍ನಲ್ಲಿ ಎರಡು ಬೆಳ್ಳಿ ಪದಕ ಹಾಗೂ ” ಏಷ್ಯಾನ್ ಫೆಸಿಪಿಕ್ ಐಕಾನಿಕ್ ಕೋಚ್ ಅವಾರ್ಡ್” ದಿವ್ಯಾ ಶೆಟ್ಟಿ  ಪಡೆದಿದ್ದಾರೆ.

ಅವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೆಹೊಳೆ, ಫ್ರೌಢ ಶಿಕ್ಷಣ ಸರಕಾರಿ ಪ್ರೌಢ ಶಾಲೆ ಕಿರಿಮಂಜೇಶ್ವರ ಹಾಗೂ ಪದವಿ ಪೂರ್ವ ಶಿಕ್ಷಣ ಸರಕಾರಿ ಪದವಿ ಪೂರ್ವ ಕಾಲೇಜು ನಾವುಂದದಲ್ಲಿ ಪಡೆದಿದ್ದರೆ.

ಯೋಗಾಸನ ಕ್ಷೇತ್ರದಲ್ಲಿ ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಪ್ರತಿಷ್ಠಿತ ಹಲವಾರು ಪದಕ- ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅವರು ಮೂಲತಃ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಕುದ್ರು ಗೋಡಿನ ಮಂಜು ಶೆಟ್ಟಿ ಹಾಗೂ ಕುಸುಮ ದಂಪತಿಗಳ ಮಗಳು.

Exit mobile version