ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೋಟರಿ ಕ್ಲಬ್ ಇದರ ವತಿಯಿಂದ ಗ್ರಾಮೀಣ ಭಾಗದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲಂದೂರು ಇಲ್ಲಿನ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟನ್ನು ವಿತರಿಸಲಾಯಿತು ಹಾಗೂ ಜೆಸಿ ಶಿರೂರು ವತಿಯಿಂದ ಮಕ್ಕಳಿಗೆ ಐಡಿ ಕಾರ್ಡನ್ನು ವಿತರಿಸಲಾಯಿತು.

ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ವಿನಾಯಕ ಗಾಣಿಗ ಅವರು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಅಧ್ಯಕ್ಷರಾದ ಮೋಹನ ರೇವಣಕರ್ , ಶಾಲಾ ಮುಖ್ಯೋಪಾಧ್ಯಾಯರಾದ ಮಾಧವ ಬಿಲ್ಲವ, ಜೆಸಿಐ ಅಧ್ಯಕ್ಷರಾದ ಸತೀಶ್ ಕೊಠಾರಿ, ಮಂಜುನಾಥ ಗಾಣಿಗ ಆರೋಗ್ಯ ಮೇಲ್ವಿಚಾರಕರು ಪ್ರಾಥಮಿಕ ಆರೋಗ್ಯ ಕೇಂದ್ರ ಬ್ರಹ್ಮಾ ವರ, ಉದಯಮಾಕೋಡಿ ಅಧ್ಯಕ್ಷರು ಮಾನಸ ಮಿತ್ರ ಮಂಡಳಿ ಉಪಸ್ಥಿತರಿದ್ದರು.
ಸುರೇಶ್ ಮಾ ಕೋಡಿ ವೇದಿಕೆಗೆ ಆಹ್ವಾನಿಸಿ, ಹೆರಿಯ ಪೂಜಾರಿ ಕಾರ್ಯಕ್ರಮ ನಿರೂಪಿಸಿ , ಗೋಪಾಲ ಗಾಣಿಗ ಧನ್ಯವಾದ ಗೈದರು.