Site icon Kundapra.com ಕುಂದಾಪ್ರ ಡಾಟ್ ಕಾಂ

ಮರಾಠಿ ಸಮಾಜದಿಂದ ಶೃಂಗೇರಿ ಶಾರದಾ ಪೀಠದ ಸ್ವಾಮೀಜಿಗೆ ಗುರುವಂದನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಶೃಂಗೇರಿ ಶಾರದಾ ಪೀಠದ ಚಾತುರ್ಮಾಸ್ಯ ಆಚರಣೆಯ ಸಂದರ್ಭದಲ್ಲಿ ಬೈಂದೂರು ಮತ್ತು ಕುಂದಾಪುರ ವಲಯದ 36 ಕೇರಿಯ ಸಮಸ್ತ ಮರಾಠಿ ಸಮಾಜ ಬಾಂಧವರು, ಗುರಿಕಾರರು ಮತ್ತು ಮುಖಂಡರನ್ನು ಒಳಗೊಂಡು  ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮಿ ಅವರಿಗೆ ಗುರುವಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗುರುವಂದನಾ ಸಮಿತಿಯ ಅಧ್ಯಕ್ಷರಾದ ಭೋಜ ನಾಯ್ಕ ಜಾಂಬ್ಳಿ ಹೊಂಡ, ಉಪಾಧ್ಯಕ್ಷರಾದ ಮಹಾಲಿಂಗ  ನಾಯ್ಕ ಜೋಗಿಜಡ್ಡು, ನಾರಾಯಣ ನಾಯ್ಕ ಬ್ರಮ್ಮೇರಿ, ಜಯರಾಮ ನಾಯ್ಕ ಮಂಗನಮಕ್ಕಿ, ಶೇಷು ನಾಯ್ಕ ಮಾವಿನಕೊಡ್ಲು ಹಾಗೂ ಕಾರ್ಯದರ್ಶಿ ಉದಯ ನಾಯ್ಕ ಕನ್ಕಿಮಡಿ, ಹಾಗೂ ವೇ. ಮು. ಲೋಕೇಶ್ ಅಡಿಗ ಉಪಸ್ಥಿತರಿದ್ದರು.

Exit mobile version