Kundapra.com ಕುಂದಾಪ್ರ ಡಾಟ್ ಕಾಂ

ದಕ್ಷಿಣ ಕನ್ನಡ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ಗೆ 63 ಪದಕ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
ದಕ್ಷಿಣ ಕನ್ನಡ ಅಥ್ಲೆಟಿಕ್ಸ್ ಸಂಸ್ಥೆಯ ವತಿಯಿಂದ ನಡೆದ ದಕ್ಷಿಣ ಕನ್ನಡ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್‌ನ ವಿದ್ಯಾರ್ಥಿಗಳು 25 ಚಿನ್ನ, 18 ಬೆಳ್ಳಿ, 20 ಕಂಚು ಒಟ್ಟು 63 ಪದಕಗಳನ್ನು ಪಡೆದುಕೊಂಡರು.

ಸೆಪ್ಟಂಬರ್ 14 ರಿಂದ 17 ರವರೆಗೆ ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕಿರಿಯರ ಹಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನಿಂದ ಕಿರಿಯರ ವಿಭಾಗದಲ್ಲಿ 60 ವಿದ್ಯಾರ್ಥಿಗಳು ಹಾಗೂ ಹಿರಿಯರ ವಿಭಾಗದಲ್ಲಿ 30 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 90 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಮಟ್ಟದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಆಳ್ವಾಸ್ ಸ್ಪೋರ್ಟ್ಸ್ ಕ್ಷಬ್‌ನ್ನು ಪ್ರತಿನಿಧಿಸಲಿದ್ದಾರೆ.

ಫಲಿತಾಂಶ :
14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ:
ಚಕ್ರವರ್ತಿ- ತ್ರಯತ್ಲನ್ ಸಿ (ಪ್ರಥಮ), ಚಿರಾಗ್- ತ್ರಯತ್ಲನ್ ಸಿ (ದ್ವಿತೀಯ), ಆದಿತ್ಯ- ತ್ರಯತ್ಲನ್ ಸಿ (ದ್ವಿತೀಯ), ಅಮರೇಶ್- ತ್ರಯತ್ಲನ್ ಎ (ಪ್ರಥಮ), ಕೌಶಿಕ್- ತ್ರಯತ್ಲನ್ ಎ (ತೃತೀಯ), ಸುಜನ್ -ತ್ರಯತ್ಲನ್ ಬಿ (ದ್ವಿತೀಯ), ಹರ್ಷದ್ ಗೌಡ -ತ್ರಯತ್ಲನ್ ಬಿ (ತೃತೀಯ)

16 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ:
ಆಕಾಶ್ 80ಮೀ ಹರ್ಡಲ್ಸ್ (ಪ್ರಥಮ), ಗೌತಮ್ 80ಮೀ ಹರ್ಡಲ್ಸ್ (ತೃತೀಯ), ಸಾಹಿಲ್ 60ಮೀ (ತೃತೀಯ), ಮೈಲಾರಿ ಜವಲಿನ್ ಎಸೆತ (ದ್ವಿತೀಯ), ಧನುಷ್ ಗುಂಡು ಎಸೆತ (ತೃತೀಯ), ಕೃಷ್ಣ ಜವಲಿನ್ ಎಸೆತ (ಪ್ರಥಮ), ನಿಖಿಲ್ ಗುಂಡು ಎಸೆತ (ಪ್ರಥಮ), ನಿಂಗಣ್ಣ ಗೌಡ ಎತ್ತರ ಜಿಗಿತ (ತೃತೀಯ), ಪೃಥ್ವಿಕ್ ಉದ್ದ ಜಿಗಿತ (ದ್ವಿತೀಯ), ನವೀನ್ ಎತ್ತರ ಜಿಗಿತ (ಪ್ರಥಮ)

18 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ:
ರಘುವೀರ್ 1000ಮೀ (ದ್ವಿತೀಯ), ಶಿವಾನಂದ 1000ಮೀ (ಪ್ರಥಮ), ಹನುಮಂತರಾಯ 1000ಮೀ (ತೃತೀಯ), ಸರ್ವಜಿತ್ 100ಮೀ (ತೃತೀಯ), ನೋಯಲ್ ಉದ್ದ ಜಿಗಿತ (ತೃತೀಯ), ವೀರೇಶ್ 400ಮೀ (ತೃತೀಯ), ರೇನಿಶ್ 200ಮೀ (ತೃತೀಯ), ದಯಾನಂದ 400ಮೀ ಮತ್ತು 200ಮೀ (ಪ್ರಥಮ), ವಿಜಯ ಜವಲಿನ್ ಎಸೆತ (ಪ್ರಥಮ), ನಿತಿನ್ ಚಕ್ರ ಎಸೆತ (ಪ್ರಥಮ), ಶೋಭಿತ್ ಗುಂಡು ಎಸೆತ (ಪ್ರಥಮ) ಮತ್ತು ಚಕ್ರ ಎಸೆತ (ದ್ವಿತೀಯ), ಸುಮಂತ್ ಉದ್ದ ಜಿಗಿತ (ದ್ವಿತೀಯ)

14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ:
ರಕ್ಷಿತಾ ತ್ರಯತ್ಲನ್ ಎ (ದ್ವಿತೀಯ), ವೀಕ್ಷಾ ತ್ರಯತ್ಲನ್ ಬಿ (ದ್ವಿತೀಯ), ಮೇಘಾ ತ್ರಯತ್ಲನ್ ಸಿ (ದ್ವಿತೀಯ)

16 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ:
ಪ್ರಿಯಾಂಕ 600ಮೀ (ದ್ವಿತೀಯ), ನಾಗಿಣಿ 600ಮೀ (ತೃತಿಯ), ಪ್ರತಿಭಾ ಗುಂಡು ಎಸೆತ (ತೃತೀಯ), ಚಸ್ಮಿತಾ ಜವಲಿನ್ ಎಸೆತ (ದ್ವಿತೀಯ), ಪ್ರೇಕ್ಷಿತಾ ಜವಲಿನ್ ಎಸೆತ (ಪ್ರಥಮ), ಐಶ್ನಿ ಗುಂಡು ಎಸೆತ (ಪ್ರಥಮ), ಗೋಪಿಕಾ 60ಮೀ (ಪ್ರಥಮ), ಸಹನಾ ಉದ್ದ ಜಿಗಿತ (ತೃತೀಯ), ಮೀರಾಶ್ರೀ ಎತ್ತರ ಜಿಗಿತ (ತೃತೀಯ)

18 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ:
ಲಹರಿ 200ಮೀ (ಪ್ರಥಮ), ಚೊಂದಮ್ಮ 100ಮೀ ಹರ್ಡಲ್ಸ್ (ಪ್ರಥಮ), ಜಾನಕಿ 100 ಮೀ (ಪ್ರಥಮ) ಮತ್ತು ಎತ್ತರ ಜಿಗಿತ (ದ್ವಿತೀಯ), ಭೈರವಿ 400ಮೀ (ಪ್ರಥಮ), ನಿರ್ಮಲಾ 200 ಮೀ (ತೃತೀಯ), ವೈಷ್ಣವಿ 100 ಮೀ (ದ್ವಿತೀಯ), ರಮ್ಯ ವೆಂಕಟರಮಣ 100ಮೀ ಹರ್ಡಲ್ಸ್ (ತೃತೀಯ), ಚರಿಷ್ಮ 1000ಮೀ ಹಾಗೂ 3000 ಮೀ (ಪ್ರಥಮ), ವೃತಾ ಹೆಗ್ಡೆ ಗುಂಡು ಎಸೆತ (ದ್ವಿತೀಯ) ಚಕ್ರ ಎಸೆತ (ಪ್ರಥಮ), ವಿಸ್ಮಿತಾ ಗುಂಡು ಎಸೆತ (ಪ್ರಥಮ), ಭೂಮಿಕಾ ಎತ್ತರ ಜಿಗಿತ (ಪ್ರಥಮ) ನಂದಾ ಜಾವಲಿನ್ ಎಸೆತ (ದ್ವಿತೀಯ) ಸ್ಥಾನ ಪಡೆದಿದ್ದಾರೆ.

ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

Exit mobile version