Site icon Kundapra.com ಕುಂದಾಪ್ರ ಡಾಟ್ ಕಾಂ

ರೋಟರಿ ಕ್ಲಬ್ ಕುಂದಾಪುರ ಮಿಡ್‌ ಟೌನ್‌ನಿಂದ ಹುಲ್ಲು ಕಟ್ಟಿಂಗ್ ಯಂತ್ರ ಕೊಡುಗೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ರೋಟರಿ ಕ್ಲಬ್ ಕುಂದಾಪುರ ಮಿಡ್‌ ಟೌನ್‌ನಿಂದ ಸ್ವಂತ ಉದ್ಯೋಗ ಕಲ್ಪಿಸುವ ನೆಲೆಯಲ್ಲಿ ನ್ಯೂ ಮೆಡಿಕಲ್ ಸೆಂಟರ್‌ನ ಡಾ. ರಂಜನ್ ಶೆಟ್ಟಿ ಸಹಕಾರದೊಂದಿಗೆ ಹೇರಿಕುದ್ರು ನಿವಾಸಿ ಚಂದ್ರಶೇಖರ ಶೆಟ್ಟಿ ಅವರಿಗೆ ಹುಲ್ಲು ಕಟ್ಟಿಂಗ್ ಯಂತ್ರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಿಡ್‌ ಟೌನ್‌ ಅಧ್ಯಕ್ಷ ಶೇಖರ್ ಶೆಟ್ಟಿ ಕಾರ್ಯದರ್ಶಿ ಉದಯ್ ಶೆಟ್ಟಿ, ಕ್ಲಬ್‌ನ ಸದಸ್ಯರಾದ ರವಿರಾಜ್ ಶೆಟ್ಟಿ, ಸುನಿಲ್ ಶೆಟ್ಟಿ ಹೇರಿಕುದ್ರು, ಸ್ಥಳೀಯರಾದ ಮಹಾಬಲ ಪೂಜಾರಿ, ಸಂಜೀವ್ ಪೂಜಾರಿ, ಲಕ್ಷ್ಮಣ್ ಶೆಟ್ಟಿ, ದಿನಕರ್ ಶೆಟ್ಟಿ, ಮಹೇಂದ್ರ, ಪ್ರಫುಲ್, ಪ್ರಸನ್ನ ಉಪಸ್ಥಿತರಿದ್ದರು.

Exit mobile version