Kundapra.com ಕುಂದಾಪ್ರ ಡಾಟ್ ಕಾಂ

ಎ.ವಿ. ಹೆಬ್ಬಾರ್ ಹಾಗೂ ಅವಿನಾಶ್ ಹೆಬ್ಬಾರ್ ಸ್ಮರಣೆಯಲ್ಲಿ ಸೀತಾರ್ ವಾದನ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ ಅವರ ಆಶ್ರಯದಲ್ಲಿ ದಿ.ಎ.ವಿ ಹೆಬ್ಬಾರ್ ಹಾಗೂ ದಿ.ಅವಿನಾಶ್ ಹೆಬ್ಬಾರ್ ಸಂಸ್ಮರಣೆ ಅಂಗವಾಗಿ ಸೀತಾರ್ ವಾದನ ಹಾಗೂ ಗಾಯನ ಕಾರ್ಯಕ್ರಮ ಕುಂದಾಪುರ ಪಾರಿಜಾತ ಹೋಟೆಲ್‌ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು.

ವಿದ್ವಾನ್ ಭಾರ್ಗವ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. ಖ್ಯಾತ ವಿದ್ವಾನ್ ಭಾರ್ಗವ ಹೆಗಡೆ ಅವರಿಂದ ಸೀತಾರ್ ವಾದನ ಕಾರ್ಯಕ್ರಮ ನಡೆಯಿತು. ವಿಘ್ನೇಶ್ ಕಾಮತ್ ಕೋಟೇಶ್ವರ ತಬಲಾದಲ್ಲಿ ಸಹಕರಿಸಿದರು. ನಿಹಾರಿಕಾ ದೇರಾಜೆ ಅವರಿಂದ ಹಿಂದುಸ್ತಾನಿ ಗಾಯನ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಭಾರವಿ ದೇರಾಜೆ, ಹಾರ್ಮೋನಿಯಂನಲ್ಲಿ ಶಶಿಕಿರಣ್ ಮಣಿಪಾಲ ಮತ್ತು ವಿವೇಕ ಪೈ ಸಹಕರಿಸಿದರು.

ಮುಖ್ಯ ಅತಿಥಿಯಾಗಿ ಸಂಗೀತ ಭಾರತಿ ಸಂಸ್ಥೆಯ ವಿಶ್ವಸ್ಥರಾದ ಎ.ಎಸ್.ಎನ್.ಹೆಬ್ಬಾರ್, ಡಾ| ಎಚ್.ಆರ್.ಹೆಬ್ಬಾರ್, ಕೆ.ಸೀತಾರಾಮ ನಕ್ಕತ್ತಾಯ, ರೇಖಾ ಕಾರಂತ, ಸುಪ್ರಸನ್ನ ಬಿ.ನಕ್ಕತ್ತಾಯ ಉಪಸ್ಥತರಿದ್ದರು.

ಸಂಗೀತ ಭಾರತಿ ಸಂಸ್ಥೆಯ ಅಧ್ಯಕ್ಷ ಕೆ.ಶ್ರೀಧರ ಕಾಮತ್ ಅತಿಥಿಗಳನ್ನು ಗೌರವಿಸಿದರು. ಡಾ| ಆದರ್ಶ ಹೆಬ್ಬಾರ್ ಕಲಾವಿದರಿಗೆ ಸ್ಮರಣಿಕೆ ನೀಡಿದರು. ಯು.ಎಸ್.ಶೆಣೈ ಸ್ವಾಗತಿಸಿದರು. ಕಾರ್ಯದರ್ಶಿ ನಾರಾಯಣ ನಿರೂಪಿಸಿದರು.

Exit mobile version