Site icon Kundapra.com ಕುಂದಾಪ್ರ ಡಾಟ್ ಕಾಂ

ಸಾವಿತ್ರಮ್ಮ- ಪ್ರೊ.ಎಂ.ವಿ.ಸೀ ಸಾಹಿತ್ಯ ಪುರಸ್ಕಾರಕ್ಕೆ ಮಂಗಳೂರಿನ ಎ.ವಿ. ನಾವಡ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೆಂಗಳೂರು:
ಬಿ.ಎಂ. ಶ್ರೀ. ಪ್ರತಿಷ್ಠಾನ ನೀಡುವ “ಸಾವಿತ್ರಮ್ಮ-ಪ್ರೊ.ಎಂ.ವಿ.ಸೀ. ಸಾಹಿತ್ಯ ಪುರಸ್ಕಾರಕ್ಕೆ ಸಂಶೋಧಕರಾದ ಮಂಗಳೂರಿನ ಎ.ವಿ. ನಾವಡ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 30 ಸಾವಿರ ನಗದು, ಸ್ಮರಣ ಫಲಕ ಮತ್ತು ಅಭಿನಂದನಾ ಪತ್ರ ಒಳಗೊಂಡಿದೆ. ಮಲ್ಲೇಪುರಂ ಜಿ. ವೆಂಕಟೇಶ್, ಎಚ್.ಟಿ. ಪೋತೆ ಅವರನ್ನು ಒಳಗೊಂಡ ಸಮಿತಿ ಈ ಆಯ್ಕೆ ಮಾಡಿದೆ.

ಸಂಶೋಧನಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಪರಿಗಣಿಸಬೇಕೆಂಬ ನಿಬಂಧನೆಯಂತೆ ಈ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜು ತಿಳಿಸಿದ್ದಾರೆ.

ಬೆಂಗಳೂರಿನ ಎನ್.ಆ‌ರ್. ಕಾಲೊನಿಯಲ್ಲಿರುವ ಬಿ.ಎಂ ಶ್ರೀ ಪ್ರತಿಷ್ಠಾನದಲ್ಲಿ ಸೆಪ್ಟೆಂಬರ್ 9ರಂದು ನಡೆಯುವ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

Exit mobile version