Site icon Kundapra.com ಕುಂದಾಪ್ರ ಡಾಟ್ ಕಾಂ

ಮೊಬೈಲ್‌ನಲ್ಲೇ ಕೆಲಸ ಕೊಡಿಸುವುದಾಗಿ ವಂಚನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೋಟ ವ್ಯಾಪ್ತಿಯ ನಿವಾಸಿ ಅಕ್ಷತಾ (26) ಎಂಬವರಿಗೆ ಮೊಬೈಲ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಂದ ಜಾಹೀರಾತು ನಂಬಿ ಅವರು ಲಿಂಕ್ ಒತ್ತಿದ್ದು 9 ಆರ್ಡರ್ ಮುಗಿಸುವಂತೆ ಆದೇಶ ಬಂದಿತ್ತು. ಅದನ್ನು ನಂಬಿ ಇನ್ನೊಬ್ಬ ಹಂತಹಂತವಾಗಿ 67,330 ರೂ. ಪಾವತಿ ಮಾಡಿದ್ದರು.

ಅದಕ್ಕೆ ಪ್ರತಿಯಾಗಿ ಯಾವುದೇ ಬೋನಸ್ ನೀಡದೆ ವಂಚನೆ ಎಸಗಿದ್ದಲ್ಲದೆ ಪಾವತಿಸಿದ್ದ ಹಣ ವಾಪಸ್ ನೀಡದೆ ವಂಚನೆ ಎಸಗಿದ್ದಾರೆ ಎಂದು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version