ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಿಜೆಪಿ ಬೈಂದೂರು ಮಂಡಲ ಇಂದು ಕೊಲ್ಲೂರು ಮಹಾಶಕ್ತಿ ಕೇಂದ್ರದ ಪುರಾಣಿಕ್ ಸಭಾ ಭವನದಲ್ಲಿ ಆಯೋಜಿಸಿದ್ದ “ಸದಸ್ಯತ್ವ ಅಭಿಯಾನ-2024” ಕಾರ್ಯಕ್ರಮದಲ್ಲಿ ಭಾಗಿಯಾಗಿ ಸದಸ್ಯತ್ವ ಸಂಖ್ಯೆಗೆ ಮಿಸ್ ಕಾಲ್ ನೀಡಿ ಡಿಜಿಟಲ್ ಲಿಂಕ್ ಮುಖೇನ ನೆರೆದಿದ್ದ ಜನಸಾಮಾನ್ಯರಿಗೆ ಸದಸ್ಯತ್ವ ಕೊಡಿಸುವ ಮೂಲಕ ಚಾಲನೆ ಕೊಡಲಾಯಿತು.
ಈ ಸದಸ್ಯತ್ವ ಅಭಿಯಾನ ಕೇವಲ ಪಕ್ಷದ ಸದಸ್ಯತ್ವವನ್ನು ದುಪ್ಪಟ್ಟು ಮಾಡುವ ಉದ್ದೇಶ ಮಾತ್ರವಲ್ಲದೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ “ವಿಕಸಿತ ಭಾರತ” ಪರಿಕಲ್ಪನೆಯನ್ನು ಸಾಕಾರಗೊಳಿಸುವ ಆಂದೋಲನಕ್ಕೆ ಬಲ ನೀಡುವುದಾಗಿದೆ.
ಜೊತೆಗೆ ಈ ಐತಿಹಾಸಿಕ ಅಭಿಯಾನದಿಂದ ರಾಷ್ಟ್ರೀಯ ಮಟ್ಟದಿಂದ ಹಿಡಿದು ರಾಜ್ಯ, ಜಿಲ್ಲೆ, ಗ್ರಾಮ ಮತ್ತು ಬೂತ್ ಮಟ್ಟದವರೆಗೆ ಪಕ್ಷವನ್ನು ಮುಟ್ಟಿಸುವುದಾಗಿದೆ. ಈ ಮೂಲಕ ಪ್ರತಿ ಬೂತ್ ಗಳಲ್ಲಿ ಗೆಲುವು ಸಾಧಿಸುವುದರಿಂದ ಚುನಾವಣೆ ಗೆಲ್ಲಲು ಬಲ ಸಿಕ್ಕಂತಾಗುತ್ತದೆ.
ಈ ನಿಟ್ಟಿನಲ್ಲಿ ನಮ್ಮ ಪಕ್ಷದ ದೈವ ದುರ್ಲಭ ಕಾರ್ಯಕರ್ತನು ಕಾರ್ಯಪ್ರವೃತ್ತರಾಗಿ ಅಭಿಯಾನವನ್ನು ಆಂದೋಲನ ರೀತಿಯಲ್ಲಿ ಜಾರಿಗೆ ತರುವ ವಾಗ್ದಾನ ಮಾಡಬೇಕಿದೆ. ಇದರೊಂದಿಗೆ ಪ್ರಧಾನಿಯವರ ಆಲೋಚನೆಯಂತೆ ಒಂದು ಲಕ್ಷ ಯುವಕರನ್ನು ರಾಜಕಾರಣಕ್ಕೆ ತರುವ ಕಾರ್ಯ ಕೂಡ ನಡೆಯಬೇಕಿದೆ.
ಯುವ ಜನಾಂಗವನ್ನು ಹಾಗೂ ಮಹಿಳಾ ಮತದಾರರನ್ನು ಪಕ್ಷದ ಸದಸ್ಯತ್ವ ಪಡೆದುಕೊಳ್ಳಲು ಹೆಚ್ಚಿನ ಮಟ್ಟದಲ್ಲಿ ಶ್ರಮ ಹಾಕುವಂತೆ ಕರೆ ಕೊಡಲಾಯಿತು. “ಸಬ್ ಕಾ ಸಾಥ್ – ಸಬ್ ಕಾ ವಿಶ್ವಾಸ್” ಘೋಷ ವಾಕ್ಯದಡಿ ಪ್ರತಿ ಕಾರ್ಯಕರ್ತನು ಕಾರ್ಯನಿರ್ವಹಿಸಬೇಕು ಎಂದು ಕರೆ ಕೊಡಲಾಯಿತು.
ಈ ಸಮಯದಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ, ಮಂಡಲ ಅಧ್ಯಕ್ಷರಾದ ದೀಪಕ್ ಶೆಟ್ಟಿ, ಪ್ರಮುಖರಾದ ಕೃಷ್ಣ ಪ್ರಸಾದ್, ಪ್ರಿಯದರ್ಶಿನಿ ಬೆಸ್ಕೂರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.