Site icon Kundapra.com ಕುಂದಾಪ್ರ ಡಾಟ್ ಕಾಂ

ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಜನ್ ಸಂಧ್ಯಾ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮ ಶತಾಬ್ದಿ ಆರಾಧನಾ ಮಹೋತ್ಸವದ ಅಂಗವಾಗಿ ಖ್ಯಾತ ಗಾಯಕ ಶಂಕರ ಶ್ಯಾನುಭಾಗ ಅವರ ವತಿಯಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಿತು.

ದೇವಾಲಯದ ಆಡಳಿತ ಮೊಕ್ತೇಸರ ಕೆ.ರಾಧಾಕೃಷ್ಣ ಶೆಣೈ ಹಾಗೂ ಶಂಕರ ಶ್ಯಾನುಭಾಗ ಕಾರ್ಯಕ್ರಮ ಉದ್ಘಾಟಿಸಿದರು.

ಶಂಕರ ಶ್ಯಾನುಭಾಗ ಅವರೊಂದಿಗೆ ಶಂಕರ ಶೆಣೈ, ಲೋಕೇಶ, ಹರಿ, ಅಶ್ವಥ, ಅದೃತ ಪೈ ಹಾರ್ಮೋನಿಯಂ, ತಬಲಾ, ತಾಳ ಸಂವಾದಿನಿಯಲ್ಲಿ ಸಹಕರಿಸಿದ್ದರು. ಕಾರ್ಯಕ್ರಮ ಸಂಯೋಜಕರಾದ ಕೆ. ಪದ್ಮನಾಭ ಶೆಣೈ ಕಲಾವಿದರನ್ನು ಗೌರವಿಸಿದರು.  ಪಿ.ಜಯವಂತ ಪೈ ನಿರೂಪಿಸಿದರು.

Exit mobile version