Site icon Kundapra.com ಕುಂದಾಪ್ರ ಡಾಟ್ ಕಾಂ

ಎಂಜಿನಿಯರ್ಸ್‌ ಡೇ ಅಂಗವಾಗಿ ಚಂದ್ರಶೇಖರ ಮೇಸ್ತ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ರೋಟರಿ ಕ್ಲಬ್‌ ಬೈಂದೂರು ವತಿಯಿಂದ ರೋಟರಿ ಸಮುದಾಯ ಭವನದಲ್ಲಿ ಭಾನುವಾರ ಎಂಜಿನಿಯರ್ಸ್‌ ಡೇ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಎಂಜಿನಿಯರ್, ಬೈಂದೂರು ಎಸ್.ಡಿ. ಅಸೋಸಿಯೇಟ್ಸ್‌ನ ಚಂದ್ರಶೇಖರ ಮೇಸ್ತ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಈ ಸಂದರ್ಭ ಬೈಂದೂರು ರೋಟರಿ ಅಧ್ಯಕ್ಷ ಮೋಹನ್‌ ರೇವಣ್ಕರ್‌, ಕಾರ್ಯದರ್ಶಿ ಸುನಿಲ್‌ ಹೆಚ್.‌ ಜಿ., ರೋಟೆರಿಯನ್‌ಗಳಾದ ಐ. ನಾರಾಯಣ. ಜತಿಂದ್ರ ಮರವಂತೆ, ರಾಘವೇಂದ್ರ ಉಡುಪ, ವಿಷ್ಣು ಆರ್. ಪೈ, ಶಾರದಾ ನಾರಾಯಣ್, ಚಂದ್ರಶೇಖರ್ ಪೂಜಾರಿ, ಸುಬ್ರಹ್ಮಣ್ಯ ಜಿ, ಆನ್ಸ್ ರೂಪ ರೇವಣ್ಕರ್‌, ಪೂರ್ಣಿಮಾ ಪೈ ಉಪಸ್ಥಿತರಿದ್ದರು.

Exit mobile version