Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಮಾತೃಭೂಮಿ ಮಹಿಳಾ ಸಹಕಾರಿ ಸಂಘದ ನೂತನ ಕಛೇರಿ ಉದ್ಘಾಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಮಾತೃಭೂಮಿ ಮಹಿಳಾ ಸಹಕಾರಿ ಸಂಘ ಬೈಂದೂರು ಇದರ ನೂತನ ಕಛೇರಿ ಇಂದು ಮುಕಾಂಬಿಕಾ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು.

ಸಹಕಾರಿ ಧುರೀಣ ಎಸ್.ರಾಜು ಪೂಜಾರಿ ಅವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಖನ್ಯ ಹಾಗೂ ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕರಾದ  ಅರುಣ್ ಕುಮಾರ್ ಎಸ್. ವಿ, ಸದಾಶಿವ ಡಿ. ಪಡುವರಿ, ಬಾಲಯ್ಯ ಶೇರುಗಾರ, ಸಂಘದ ಅಧ್ಯಕ್ಷರಾದ ಅನಸೂಯ ಶೇಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೆಹನಾ ಸುಲ್ತಾನಾ, ಸಿಬ್ಬಂದಿಗಳಾದ ಪೂರ್ಣಿಮಾ, ನಾಗರಾಜ್, ನಾಗಶ್ರೀ ಮುಂತಾದವರು ಉಪಸ್ಥಿತರಿದ್ದರು. ಪತ್ರಕರ್ತ ಅಂದುಕಾ ನಿರೂಪಿಸಿ ವಂದಿಸಿದರು.

Exit mobile version