Kundapra.com ಕುಂದಾಪ್ರ ಡಾಟ್ ಕಾಂ

ಲೈವ್‌ ಸ್ಟ್ರೀಮಿಂಗ್ ಚಾನೆಲ್ಸ್ ಅಸೋಸಿಯೇಷನ್‌ ಉಡುಪಿ – ದ.ಕ: ಅಧ್ಯಕ್ಷರಾಗಿ ದಿವ್ಯವರ್ಮಾ, ಕಾರ್ಯದರ್ಶಿಯಾಗಿ ಶರತ್‌ ಎಂ. ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಸೆ.18:
ನೂತನವಾಗಿ ಆರಂಭಗೊಂಡ ಲೈವ್ ಸ್ಟ್ರೀಮಿಂಗ್ ಚಾನೆಲ್ಸ್ ಅಸೋಸಿಯೇಷನ್‌ ಉಡುಪಿ – ದಕ್ಷಿಣ ಕನ್ನಡದ ಅಧ್ಯಕ್ಷರಾಗಿ ದಿವ್ಯವರ್ಮಾ ಮೂಡುಬಿದಿರೆ ಹಾಗೂ ಕಾರ್ಯದರ್ಶಿಯಾಗಿ ಶರತ್‌ ಎಂ. ಬೆಳ್ತಂಗಡಿ, ಕೋಶಾಧಿಕಾರಿಯಾಗಿ ರಾಮಚಂದ್ರ ಬರೆಪ್ಪಾಡಿ ಆಯ್ಕೆಯಾಗಿದ್ದಾರೆ.

ಮಂಗಳವಾರ ಕಾರ್ಕಳ ಬಂಡಿಮಠ ಶ್ರೀ ಮೂಡುಮಹಾಗಣಪತಿ ಕಲಾಮಂದಿರದಲ್ಲಿ ಜರುಗಿದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಸಂತೋಷ್ ಹಿರಿಯಡ್ಕ ಹಾಗೂ ಗಣೇಶ್ ಮಂಗಳೂರು, ಜೊತೆ ಕಾರ್ಯದರ್ಶಿಯಾಗಿ ಸುನಿಲ್ ಬೈಂದೂರು ಹಾಗೂ ಪ್ರದೀಪ್ ಪೂಜಾರಿ ಬಂಟ್ವಾಳ, ಕ್ರೀಡಾ ಕಾರ್ಯದರ್ಶಿಯಾಗಿ ರಾಘವ ಮೂಡುಬಿದಿರೆ ಅವರನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ವಾಲ್ಟರ್‌ ನಂದಳಿಕೆ ಮತ್ತು ಗೌರವ ಸಲಹೆಗಾರರಾಗಿ ಪದ್ಮಪ್ರಸಾದ್ ಜೈನ್ ಅವರನ್ನು ಆಯ್ಕೆ ಮಾಡಲಾಯಿತು.

Exit mobile version