ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದ.ಕ.ಹಾಲು ಒಕ್ಕೂಟ ಮಂಗಳೂರು ಕೊಡಮಾಡುವ ಪ್ರಶಸ್ತಿಗಳಲ್ಲಿ ಮೇಕೋಡು ಹಾಲು ಉತ್ಪಾದಕರ ಸಂಘಕ್ಕೆ 4 ಪ್ರಶಸ್ತಿಗಳು ಲಭಿಸಿವೆ.
ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ ಜಿಲ್ಲೆಯ ಉತ್ತಮ ಹೈನುಗಾರ ಪ್ರಶಸ್ತಿ ಮತ್ತು ಹಸಿರು ಮೇವು ಘಟಕದ ಪ್ರಶಸ್ತಿ ಹಾಗೂ ಸಂಘಕ್ಕೆ ತಾಲೂಕು ಮಟ್ಟದ ಪ್ರಥಮ ಉತ್ತಮ ಗುಣಮಟ್ಟದ ಪ್ರಶಸ್ತಿ ಮತ್ತು ಜಿಲ್ಲಾ ಮಟ್ಟದ ಪ್ರಥಮ ಉತ್ತಮ ಬಿ.ಎಂ.ಸಿ ಪ್ರಶಸ್ತಿ ಲಭಿಸಿರುತ್ತದೆ.

