ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪಠ್ಯದೊಂದಿಗೆ ಸಾಹಿತ್ಯ ಕೃತಿಗಳ ಓದು ವಿದ್ಯಾರ್ಥಿಗಳನ್ನು ಭೌದ್ದಿಕ ಸಂಪನ್ನರನ್ನಾಗಿಸುತ್ತದೆ. ನಿರಂತರ ಅಧ್ಯಯನ ವ್ಯಕ್ತಿಯನ್ನು ಚಿಂತನಶೀಲರನ್ನಾಗಿಸುತ್ತದೆ ಎಂದು ಸುರಭಿ ರಿ. ಬೈಂದೂರು ಅಧ್ಯಕ್ಷ ಆನಂದ ಮದ್ದೋಡಿ ಹೇಳಿದರು.

ಅವರು ಬುಧವಾರ ಸರಕಾರಿ ಪ್ರಥಮದರ್ಜೆ ಕಾಲೇಜು ಬೈಂದೂರು ಕನ್ನಡ ವಿಭಾಗದ ನೇತೃತ್ವದಲ್ಲಿ ಸುರಭಿ ರಿ. ಬೈಂದೂರು ಸಹಯೋಗದೊಂದಿಗೆ ಕಾಲೇಜಿನಲ್ಲಿ ಆಯೋಜಿಸಲಾದ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಸಾಹಿತ್ಯ ಬಳಗ ಮತ್ತು ಕಥಾ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ ಅವರು ಮಾತನಾಡಿ, ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಸಂದರ್ಭದಲ್ಲಿ ಉತ್ತಮ ಅವಕಾಶಗಳು ಎದುರಾಗುತ್ತವೆ. ಅದನ್ನು ಸದುಪಯೋಗಪಡಿಸಿಕೊಂಡಲ್ಲಿ ಆಯಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಮ್ಮೆದುರಿನ ಸಾಧಕರನ್ನು ಸ್ಪೂರ್ತಿಯಾಗಿಸಿಕೊಂಡು ಗುರಿಸೇರಲು ವಿದ್ಯಾರ್ಥಿಗಳು ನಿರಂತರವಾಗಿ ಶ್ರಮಿಸಬೇಕಿದೆ ಎಂದರು.
ಹೆಸ್ಕತ್ತೂರು ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಹಾಗೂ ಸುರಭಿ ಉಪಾಧ್ಯಕ್ಷ ಅಬ್ದುಲ್ ರವೂಫ್ ಅವರು ಲೇಖನ ಸತೀಶ್ ಚಪ್ಪರಿಕೆ ಅವರ ವರ್ಜಿನ್ ಮೊಹಿತೋ ಕಥಾಸಂಕಲನದಿಂದ ಆಯ್ದ ಕಥೆಯನ್ನು ವಾಚಿಸಿದರು. ಈ ವೇಳೆ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ನವೀನ್ ಹೆಚ್. ಜಿ., ಉಪನ್ಯಾಸಕರಾದ ಸತೀಶ್ ಎಂ., ಮಣಿಕಂಠ ದೇವಾಡಿಗ, ಸುರಭಿ ಉಪಾಧ್ಯಕ್ಷ ಸುರೇಶ್ ಹುದಾರ್, ನಿರ್ದೇಶಕ ಸುಧಾಕರ ̧ಪಿ, ಸದಸ್ಯರುಗಳಾದ ಉದಯ ಗಾಣಿಗ, ಸುನಿಲ್ ಹೆಚ್. ಜಿ., ವೆಂಕಟರಮಣ ಡಿ, ಗಣೇಶ್ ಟೈಲರ್, ವಿನೋದಾ ನಾಯ್ಕ್, ನಾಗರತ್ನ ಇನ್ನಿತರರರು ಉಪಸ್ಥಿತರಿದ್ದರು.
ಕಳೆದ ಸಾಲಿನಲ್ಲಿ ರ್ಯಾಂಕ್ ಪಡೆದು ತೇರ್ಗಡೆಯಾದ ವಿದ್ಯಾರ್ಥಿಯನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿನಿಯರಾದ ರೂಪಾ ಸ್ವಾಗತಿಸಿ, ಸಿಂಚನಾ ವಂದಿಸಿದರು. ಮೇಘಾ ಕಾರ್ಯಕ್ರಮ ನಿರೂಪಿಸಿದರು.