Site icon Kundapra.com ಕುಂದಾಪ್ರ ಡಾಟ್ ಕಾಂ

ಆತ್ಮಹತ್ಯೆಗೆ ಶರಣಾದ ಎಂಬಿಬಿಎಸ್‌ ಪದವೀಧರ ಯುವಕ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಕೋಟೇಶ್ವರದ ದೇವಸ್ಥಾನ ಕೆರೆಗೆ ಬಿದ್ದು ಎಂಬಿಬಿಎಸ್ ಪದವೀಧರ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಹಂಗಳೂರಿನ ಗೌರೀಶ್‌ ಬಿ.ಆರ್‌. (25) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಎಂ.ಬಿ.ಬಿ.ಎಸ್. ಮುಗಿಸಿದ ಬಳಿಕ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಕ್ಟೀಸ್ ಮಾಡುತ್ತಿದ್ದ. ಬಳಿಕ ಉನ್ನತ ವ್ಯಾಸಂಗ ಎಂ.ಎಸ್. ಮಾಡಲು ಪರೀಕ್ಷೆ ಬರೆದಿದ್ದು, ಕಳೆದ ಕೆಲವು ದಿನಗಳಿಂದ ಗೌರೀಶ್ ಖಿನ್ನನಾಗಿದ್ದ ಎನ್ನಲಾಗಿದೆ.

ಬುಧವಾರ ಸಂಜೆ ಈಜುಕೊಳದಲ್ಲಿ ಈಜಲು ಹೋಗುವುದಾಗಿ ಮನೆಯಿಂದ ತೆರಳಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಕೋಟೇಶ್ವರ ದೇವಸ್ಥಾನದ ಕೆರೆ ಸಮೀಪ ಬುಧವಾರ ತಡರಾತ್ರಿ ಬ್ಯಾಗ್‌, ಮೊಬೈಲ್‌ ಫೋನ್‌, ಚಪ್ಪಲಿ ಕಂಡುಬಂದಿತ್ತು. ಅಂದು ಸಂಜೆ 5.30ರಿಂದ ರಾತ್ರಿ 11 ಗಂಟೆಯ ನಡುವೆ ಕೆರೆಗೆ ಕಾಲುಜಾರಿ ಬಿದ್ದಿರಬಹುದು ಎಂದು ಕುಟುಂಬಿಕರು ಶಂಕಿಸಿದ್ದಾರೆ. ಗುರುವಾರ ಬೆಳಗ್ಗೆ ಕೆರೆಯಲ್ಲಿ ಹುಡುಕಿದಾಗ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.

ಈ ಬಗ್ಗೆ ಮೃತ ಯುವಕನ ಸಹೋದರ ವಿಘ್ನೇಶ್‌ ಬಿ.ಆರ್‌. ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version