Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಮಾಜಿ ಪುರಸಭಾಧ್ಯಕ್ಷ ಹೊಸಾಡು ಸುಬ್ರಾಯ ಶೇರುಗಾ‌ರ್ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,21:
ತಾಲೂಕಿನ ಪಡುವರಿ ನಿವಾಸಿ ಹೊಸಾಡು ಸುಬ್ರಾಯ ಶೇರುಗಾ‌ರ್ (92) ಅವರು ಶನಿವಾರದಂದು ಮೃತಪಟ್ಟಿದ್ದಾರೆ. ವಯೋಸಹಜವಾಗಿ ಅವರು ಇಂದು ಬೆಳಗ್ಗೆ ನಿಧನರಾದರು.

ಬೈಂದೂರು ಮಾಜಿ ಪುರಸಭಾಧ್ಯಕ್ಷರು, ಬೈಂದೂರು ಕಾ೦ಗ್ರೆಸ್ಸಿನ ಪ್ರಮುಖ ನಾಯಕರಾಗಿದ್ದರು. ಸಮಾಜದ ಮತ್ತು ರಾಜಕೀಯ, ವಿವಿಧ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸಿ ಜನಮನ್ನಣೆ ಪಡೆದಿದ್ದರು. ಸಮಾಜ ಸೇವಕರು ಉತ್ತಮ ವಾಗ್ನಿಗಳಾಗಿದ್ದ ಅವರು ರಾಮಕ್ಷತ್ರಿಯ ಸಮಾಜ ಪ್ರಮುಖ ನಾಯಕಾಗಿದ್ದರು.

ಅವರ ಧರ್ಮಪತ್ನಿ ಪಾರ್ವತಿ, ಖ್ಯಾತ ಹೃದಯ ತಜ್ಞರಾದ ಡಾಕ್ಟರ್ ಹೆಚ್. ಪ್ರಭಾಕರ್ ಮಂಗಳೂರು, ಸುಧಾಕರ್, ಪುತ್ರಿಯರಾದ ಪ್ರೇಮ, ಸುಜಾತರ, ಬಂಧುಗಳನ್ನು ಅಗಲಿದ್ದಾರೆ.

Exit mobile version