Site icon Kundapra.com ಕುಂದಾಪ್ರ ಡಾಟ್ ಕಾಂ

ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರಕ್ಕೆ ಧನ್ವಿ ಪೂಜಾರಿ ಮರವಂತೆ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ.

ಧನ್ವಿ ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಅವರ ಪುತ್ರಿಯಾಗಿದ್ದು ಪ್ರಸ್ತುತ ಹೆಮ್ಮಾಡಿಯ ಜನತಾ ಇಂಡಿಪೆಂಡೆಂಟ್ ಪಿಯು ಕಾಲೇಜ್ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡತ್ತಿದ್ದಾರೆ.

ಸೆ. 26ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಯುವ ಸಾಲು ಮರದ ತಿಮ್ಮಕ್ಕನ 113ನೇ ಜನ್ಮದಿನದ ಸಂಭ್ರಮಚಾರಣೆಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಗ್ರಹ ಸಚಿವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Exit mobile version