ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಆಶ್ರಯದಲ್ಲಿ ರಕ್ತದೊತ್ತಡದ ಮೇಲೆ ಮೊಬೈಲ್ ಆರೋಗ್ಯದ ಪರಿಣಾಮ ಎನ್ನುವ ವಿಷಯದ ಮೇಲೆ ಅರಿವು ಕಾರ್ಯಕ್ರಮ ಜರುಗಿತು .
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಣಿಪಾಲ ಇಲ್ಲಿನ ಜೆ.ಆರ್.ಎಫ್. ಆಗಿರುವ ಮಮತಾ ಅವರು ವಿದ್ಯಾರ್ಥಿಗಳಿಗೆ ಮಾತನಾಡಿ, ಮೊಬೈಲ್ ಹೆಲ್ತ್ ಅರಿವಿನ ಅವಶ್ಯಕ ಹಾಗೂ ಕೆಲವು ನಿದರ್ಶನಗಳ ಮೂಲಕ ವಿವರಿಸಿದರು.
ಕಾಲೇಜಿನ ಪ್ರಾಶುಪಾಲರಾದ ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು. ಕೆ.ಎಂ. ಸಿ. ಮಣಿಪಾಲದ ಜೆ.ಆರ್.ಎಫ್. ಆಗಿರುವ ಡೊಯ್ಲಿನ್ ಒಲಿವೆರ ಅವರು ಉಪಸ್ಥಿತರಿದ್ದರು.
ಈ ಸಂದರ್ಭ ಕಾಲೇಜಿನ ಯುವ ರೆಡ್‌ಕ್ರಾಸ್ ಸಂಯೋಜಕರಾದ ಯೋಗೀಶ್ ಶ್ಯಾನುಭೋಗ್ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಸಹ ಸಂಯೋಜಕಿ ಮಾಲತಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.