Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಮೂಲದ ವ್ಯಕ್ತಿ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಇಲ್ಲಿನ ಜಾಮಿಯಾ ಮೊಹಲ್ಲಾ ಪೊಲೀಸ್ ಚೆಕ್‌ಪೋಸ್ಟ್ ಎದುರಿನ ನಿವಾಸಿ ಬಶೀರ್ ಅಹ್ಮದ್ ಅವರ ಪುತ್ರ ಮುಬಾಶೀರ್‌ (30) ಅವರು ಸೌದಿ ಅರೇಬಿಯಾದಲ್ಲಿ ಹಠಾತ್ತನೆ ಕುಸಿದು ಬಿದ್ದು, ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಸೆ. 25ರಂದು ಮಧ್ಯಾಹ್ನ ಸಂಭವಿಸಿದೆ.

ಮುಬಾಶೀರ್‌ ಅವರು ಸೌದಿ ಅರೇಬಿಯಾದಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿದ್ದರು. 2 ವರ್ಷದ ಹಿಂದೆ ಮಹಾರಾಷ್ಟ್ರದ ಪುಣೆಯ ಯುವತಿಯೊಂದಿಗೆ ವಿವಾಹವಾಘಿದ್ದು, ಬಳಿಕ ಪತ್ನಿಯೊಂದಿಗೆ ಸೌದಿಯಲ್ಲಯೇ ನೆಲೆಸಿದ್ದರು. ಮೃತರು ಪತ್ನಿ, ತಾಯಿ, ತಂದೆ ಹಾಗೂ ಸಹೋದರನನ್ನು ಅಗಲಿದ್ದಾರೆ.

 ಅವರು ಕುಂದಾಪುರದ ಎಚ್‌ ಎಂಎಂ ಶಾಲೆ, ವಿಕೆಟರ್ ಶಾಲೆ, ಭಂಡಾರ್ ಕಾರ್ಸ್‌ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿ ಆನಂತರ ಭಟ್ಕಳದ ಅಂಜುಮಾನ್ ಕಾಲೇಜಿನಲ್ಲಿ
ಎಂಜಿನಿಯರಿಂಗ್‌ ಪದವಿ ಪೂರೈಸಿ ಸೌದಿಗೆ ತೆರಳಿದ್ದರು.

ಅಂತ್ಯಕ್ರಿಯೆ ವಿಧಿವಿಧಾನಗಳ ಬಗ್ಗೆ ಸೌದಿ ದೇಶದ ಕಾನೂನು ಪ್ರಕ್ರಿಯೆಗಳು ಮುಗಿದ ಅನಂತರವೇ ತಿಳಿದು ಬರಬೇಕಿದೆ.

ಕಷ್ಟಕ್ಕೆ ನೆರವಾಗುತ್ತಿದ್ದರು:
ಊರಿನಲ್ಲಿದ್ದಾಗ ಜನರ ಸಂಕಷ್ಟಕ್ಕೆ ನೆರವಾಗುತ್ತಿದ್ದ ಮುಬಾಶೀರ್ ಅವರು 4 ವರ್ಷಗಳ ಹಿಂದೆ ತ್ರಾಸಿ – ಮರವಂತೆ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಉಪ್ಪಿನಂಗಡಿ ಮೂಲದ ಬಾಲಕನ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಗಂಗೊಳ್ಳಿಯ ತನ್ನ ಮನೆಯಲ್ಲಿಯೇ ನೆರವೇರಿಸಲು ಅವಕಾಶ ಮಾಡಿಕೊಟ್ಟಿದ್ದರು. ಮಾತ್ರವಲ್ಲದೆ ಘಟನೆಯ ಗಾಯಾಳುವಿನ ಆಸ್ಪತ್ರೆ ವೆಚ್ಚವನ್ನು ತಾನೇ ಭರಿಸಿದ್ದರು. ಕಷ್ಟದಲ್ಲಿ ಇದ್ದಾಗ ಸಹಾಯ ಮಾಡುವುದಲ್ಲದೇ, ತುರ್ತು ಸಂದರ್ಭ ಅವರು ವೆರವಿಗೆ ಧಾವಿಸುತ್ತಿದ್ದರು.

Exit mobile version