Site icon Kundapra.com ಕುಂದಾಪ್ರ ಡಾಟ್ ಕಾಂ

ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಕಾಲರಾ ರೋಗ ತಡೆಗಟ್ಟುವಿಕೆಯ ಮಾಹಿತಿ ಕಾರ್ಯಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರೋಟರಿ ಕ್ಲಬ್ ಮಿಟ್ಟೌನ್ ಕುಂದಾಪುರ ವತಿಯಿಂದ ಪ್ರಾರ್ಥಮಿಕ ಆರೋಗ್ಯ ಕೇಂದ್ರ ಕೋಟೇಶ್ವರದಲ್ಲಿ ಗ್ರಾಮ ಪಂಚಾಯತ್‌ ಕೋಟೇಶ್ವರ ಹಾಗೂ ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ ಮಂದಾರ್ತಿ ಇವರ ಸಹಯೋಗದೊಂದಿಗೆ ಉಚಿತ  ಕಣ್ಣಿನ ತಪಾಸಣೆ ಮತ್ತು ಶಸ್ತ್ರ  ಚಿಕಿತ್ಸಾ ಶಿಬಿರ ಹಾಗೂ ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ  ರೇಬಿಸ್ ಹಾಗೂ ಕಾಲರಾ ರೋಗ ತಡೆಗಟ್ಟುವಿಕೆಯ ಮಾಹಿತಿ ಕಾರ್ಯಗಾರ ನಡೆಸಲಾಯಿತು.

ರೋಟರಿ ಮಿಡ್ ಟೌನ್ ಅಧ್ಯಕ್ಷ ಶೇಖರ್ ಎನ್ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.  ವೈದ್ಯಾಧಿಕಾರಿ  ಡಾಕ್ಟರ್ ಪೂರ್ಣಿಮಾ  ಶೇಟ್  ಮತ್ತು ಡಾ. ಮನೋಜ್ ಭಟ್  ಅವರು  ಮಾಹಿತಿ ನೀಡಿದರು.

ಕ್ಲಬ್ ನ  ಕಾರ್ಯದರ್ಶಿ  ಉದಯ್ ಶೆಟ್ಟಿ ಆಜ್ರಿ, ಗೌತಮ್ ಹೆಗ್ಢೆ, ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು,  ದಯಾನಂದ ಶೆಟ್ಟಿ ಕಟ್‌ಕೇರಿ ಉಪಸ್ಥಿತರಿದ್ದರು.

Exit mobile version