Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ: ಕಾಪು ಅಮ್ಮನ ಲೇಖನ ಯಜ್ಞ ಸಮಿತಿಯ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು ಇದರ ಜೀರ್ಣೋದ್ಧಾರ ಸಮಿತಿ ಹಾಗೂ ನವದುರ್ಗಾ ಲೇಖನ ಯಜ್ಞ ಸಮಿತಿಯ ಬೈಂದೂರು ತಾಲೂಕು ಮಟ್ಟದ ಸಭೆಯು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.

9 ಮಾತೆಯರು ಜ್ಯೋತಿ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಉದ್ಯಮಿ ಕೆ. ವಾಸುದೇವ ಶೆಟ್ಟಿ ಸಭೆಯನ್ನು ಉದ್ಧೇಶಿಸಿ ಮಾತನಾಡಿ, ಕಾಪು ಅಮ್ಮನ ದೇವಾಲಯವನ್ನು ಅಂದಾಜು 100 ಕೋಟಿ ವೆಚ್ಚದಲ್ಲಿ ಸುವ್ಯವಸ್ಥಿತವಾಗಿ ಜೀರ್ಣೋದ್ಧಾರ ಮಾಡಲು ನಿಶ್ಚಿಯಿಸಲಾಗಿದೆ.

1ನೇ ಹಂತದ 30 ರಿಂದ 4೦ ಕೋಟಿ ರೂ. ಗಳ ಕಾಮಗಾರಿ ಮುಗಿದಿದ್ದು, ಕಾಪು ಅಮ್ಮನ ವಾಖ್ಯ ನುಡಿಯಂತೆ ನಾವು ದೇವಳದ ಅಭಿವೃದ್ಧಿಯ ಬಗ್ಗೆ ಮಾತ್ರ ಪ್ರಚಾರವನ್ನು ಜಿಲ್ಲೆ, ರಾಜ್ಯ, ರಾಷ್ಟ್ರ, ವಿದೇಶದಲ್ಲೂ ಮಾಡುತ್ತಿದ್ದು ಹಣ ಸಂಗ್ರಹ ಮಾಡಲು ಎಲ್ಲಿಗೂ ಹೋಗುವುದಿಲ್ಲ, ಅಮ್ಮನ ಭಕ್ತರು ಕ್ಷೇತ್ರಕ್ಕೆ ಬಂದು ದೊಡ್ಡ ಮೊತ್ತದ ದೇಣಿಗೆ ನೀಡುತ್ತಿದ್ದು ಅಭಿವೃದ್ಧಿ ಕಾರ್ಯ ಉತ್ತಮವಾಗಿ ನಡೆಯತ್ತಿದ್ದು, ಲೇಖನ ಯಜ್ಞ ಮಹಾ ಕಾರ್ಯದಲ್ಲಿ ಬೈಂದೂರು ತಾಲೂಕಿನ ಭಕ್ತರು ಮಹಾಜನತೆ ಭಾಗಿಗಳಾಗಬೇಕು ಎನ್ನುವ ನೆಲೆಯಲ್ಲಿ ಈ ಭಾಗದ ಪ್ರಥಮ ಸಭೆಯನ್ನು ಮಾಹಿತಿ ನೀಡುವ ಸಲುವಾಗಿ ನಡೆಯುತ್ತಿದೆ ಎಂದು ಹೇಳಿದರು.

ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಲೇಖನ ಯಜ್ಞದ ವಿವರಣೆ, ಬರೆಯುವ ವಿಧಾನ, ಈ ಪುಸ್ತಕದ ಪೂಜಾ ವಿಧಾನಗಳು ಹಾಗೂ ಶ್ರೀ ದೇವಳದಲ್ಲಿ ಸಂಗ್ರಹ ಮಾಡಿ ಶತಮಾನಗಳ ಕಾಲ ಇರುವಂತೆ ವ್ಯವಸ್ಥೆ ಮಾಡುವ ಕುರಿತು ವಿವರವಾಗಿ ಮಾತನಾಡಿದರು.

ಬೈಂದೂರು ವಿಧಾನಸಭಾ ಕ್ಷೇತ್ರ ಶಾಸಕರು ಗುರುರಾಜ ಗಂಟಿಹೊಳೆ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು, ಬೈಂದೂರು ತಾಲೂಕು ಸಂಚಾಲಕರಾಗಿ ಬಿ.ಎಸ್. ಸುರೇಶ್ ಶೆಟ್ಟಿ ಅವರನ್ನು ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಪ್ರಧಾನ ಸಂಚಾಲಕ ಸುಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಕೆ. ವಿಶ್ವನಾಥ, ಸಂಚಾಲಕರು ಪ್ರಚಾರ ಸಮಿತಿ ರಘುರಾಮ ಶೆಟ್ಟಿ ಕೊಪ್ಪಲುಗಡಿ, ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸತೀಶ್ ಶೆಟ್ಟಿ, ಉದ್ಯಮಿ ಬಿ. ಎಸ್ ಸುರೇಶ್ ಶೆಟ್ಟಿ, ಸಂದ್ಯಾ ರಮೇಶ್ ಉಪಸ್ಥಿತರಿದ್ದರು,

ಯು. ಸಂದೇಶ್ ಭಟ್ ಸ್ವಾಗತಿಸಿದರು, ಗೌರಿ ದೇವಾಡಿಗ ಪ್ರಾರ್ಥಿಸಿದರು, ವಾಗ್ಮಿ ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

Exit mobile version