ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಲಯನ್ಸ್ ಕ್ಲಬ್ ಮತ್ತು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಸಹಯೋಗದಲ್ಲಿ ” ವಿದ್ಯಾರ್ಥಿಗಳಿಗೆ ಪ್ರೇರಣಾ ಭಾಷಣ” ಇತ್ತೀಚೆಗೆ ನಡೆಯಿತು .
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚೇತನ್ ರಾಮ್ ಮಾತನಾಡಿ, ಹಲವಾರು ಅನುಭವಕಥನ ಮತ್ತು ಉದಾಹರಣೆ ಸಹಿತ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಇದರ ಅಧ್ಯಕ್ಷ ಲಯನ್ ಪ್ರಜ್ಞೆಶ್. ಪ್ರಭು, ಪೋಸ್ಟ್ ಡಿಸ್ಟ್ರಿಕ್ಟ್ ಗವರ್ನರ್ ಎನ್. ಎಮ್. ಹೆಗಡೆ, ಲಯನ್ಸ್ ಕ್ಲಬ್ ಸಂಯೋಜಕರಾದ ಲಯನ್ ಮಹಮ್ಮದ್ ಮೌಲಾ, ಕಾರ್ಯದರ್ಶಿ ಲಯನ್ ಡಾ. ರವೀಂದ್ರ, ಲಯನ್ಸ್ ಕ್ಲಬ್ ಇದರ ಮತ್ತಿತರ ಸದಸ್ಯರು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಉಪಸ್ಥಿತರಿದ್ದರು.

