Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಟೌನ್ ಸೌಹಾರ್ದ ಕೋ – ಆಪರೇಟಿವ್ ಸೊಸೈಟಿ ಲಿಮಿಟೆಡ್: ವಿವಿಧ ಕೊಡುಗೆಗಳ ವಿತರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಗಂಗೊಳ್ಳಿ ಟೌನ್ ಸೌಹಾರ್ದ ಕೋ -ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಸಾರ್ವಜನಿಕ ಉಪಕಾರ ನಿಧಿಯಿಂದ ನೀಡಲಾಗುವ ವಿವಿಧ ಕೊಡುಗೆಗಳ ವಿತರಣಾ ಕಾರ್ಯಕ್ರಮ ಸಂಘದ ಗಂಗೊಳ್ಳಿಯ ಪ್ರಧಾನ ಕಚೇರಿಯ ಬೈಲೂರು ಮಂಜುನಾಥ ಶೆಣೈ ಸಭಾ ಭವನದಲ್ಲಿ ಶುಕ್ರವಾರ ಜರಗಿತು.

ಸಂಘದ ಅಧ್ಯಕ್ಷ ಜಿ. ವೆಂಕಟೇಶ ಶೆಣೈ, ಉಪಾಧ್ಯಕ್ಷ ಜಿ. ವಿಶ್ವನಾಥ್ ಆಚಾರ್ಯ ಮತ್ತು ನಿಕಟಪೂರ್ವ ಅಧ್ಯಕ್ಷ ಎಚ್. ಗಣೇಶ ಕಾಮತ್ ಅವರು ಕೊಡುಗೆಗಳನ್ನು ವಿತರಿಸಿ ಶುಭ ಹಾರೈಸಿದರು.

ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಅಕ್ಷರ ದಾಸೋಹಕ್ಕೆ 1.20 ಲಕ್ಷ ರೂ., ಗಂಗೊಳ್ಳಿ ಸಾರ್ವಜನಿಕ ಶ್ರೀ ಶಾರದೋತ್ಸವ ಸುವರ್ಣ ಮಹೋತ್ಸವಕ್ಕೆ 55,555 ರೂ., ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಲ್ಯಾಪ್ ಟಾಪ್ ಮತ್ತು ಒಂದು ಪ್ರಿಂಟರ್, ಯಳಜಿತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ 50 ಸಾವಿರ ರೂ., ರಾಷ್ಟೀಯ ಸೇವಾ ಯೋಜನೆಗೆ 10 ಸಾವಿರ ರೂ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಒಟ್ಟು 2.80 ಲಕ್ಷ ರೂ.ಗಳ ಕೊಡುಗೆಗಳನ್ನು ವಿತರಿಸಲಾಯಿತು.

ನಿರ್ದೇಶಕರಾದ ಎನ್. ಮಾಧವ ಕಿಣಿ, ಎಸ್. ವೆಂಕಟರಮಣ ಆಚಾರ್ಯ, ಜಿ. ವೇದವ್ಯಾಸ ಕೆ. ಆಚಾರ್ಯ, ಕೆ. ರಾಮನಾಥ ನಾಯಕ್, ಕೆ. ಪರಮೇಶ್ವರ ನಾಯಕ್, ಎಂ. ಜಿ. ನಾಗಪ್ರಸಾದ ಪೈ, ಕಿರಣ್ ಫಿಲಿಪ್ ಪಿಂಟೋ, ಜಿ. ವೆಂಕಟೇಶ ನಾಯಕ್, ಗೀತಾ ಜಿ. ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version