Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: 3 ದಿನಗಳ ದಸರಾ‌ ಬೇಸಿಗೆ ಶಿಬಿರ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಸೇವಾ ಸಂಗಮ ಶಿಶು ಮಂದಿರದ ಆಶ್ರಯದಲ್ಲಿ, ಸುರಭಿ ರಿ. ಬೈಂದೂರು ಸಹಕಾರದಲ್ಲಿ ಶಿಶುಮಂದಿರದ ಬಾಲ ಗೋಕುಲದ ವಿದ್ಯಾರ್ಥಿಗಳಿಗೆ 3 ದಿನಗಳ ದಸರಾ ಬೇಸಿಗೆ ಶಿಬಿರಕ್ಕೆ ಸಾಹಿತಿ ಪುಂಡಲೀಕ ನಾಯಕ್ ಅವರು ಚಾಲನೆ ನೀಡಿದರು.

ಈ ವೇಳೆ ಅವರು ಮಾತನಾಡಿ ಬಾಲ್ಯಾವಸ್ಥೆಯಲ್ಲಿಯೇ ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರ, ಕಲೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಶಿಬಿರವು ಉತ್ತಮವಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.

ಸೇವಾ ಸಂಗಮ ಟ್ರಸ್ಟ್ ಕುಂದಾಪುರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೇವಾ ಸಂಗಮ ಶಿಶುಮಂದಿರದ ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿ ವಹಿಸಿದ್ದು ಶಿಬಿರದ ಉದ್ದೇಶ ಹಾಗೂ ಕಾರ್ಯಚಟುವಟಿಕೆ ಬಗ್ಗೆ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಯೋಗ ಶಿಕ್ಷಕ ಉಪ್ಪುಂದ ಜೆಸಿಐ ಅಧ್ಯಕ್ಷರಾದ ಮಂಜುನಾಥ ದೇವಾಡಿಗ ಶುಭ ಹಾರೈಸಿದರು. ಅನನ್ಯಾ ಆಚಾರ್ ಸ್ವಾಗತಿಸಿ, ಕಾರ್ಯಕ್ರಮವನ್ನು ಸುರಭಿ ನಿರ್ದೇಶಕ ಹಾಗೂ ಸೇವಾ ಸಂಗಮ ಶಿಶು ಮಂದಿರದ ಉಪಾಧ್ಯಕ್ಷರಾದ ಸುಧಾಕರ್ ಪಿ. ಬೈಂದೂರು ನಿರೂಪಿಸಿದರು. ಸೇವಾ ಸಂಗಮದ ನಿರ್ಮಲಾ ರವೀಂದ್ರ ಕಿಣಿ ಹಾಗೂ ಆಲೂರಿನ ನಾಗರತ್ನ ಅವರು ಸಹಕರಿಸಿದರು.

Exit mobile version