Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ದೇವಾಡಿಗ ಸಂಘ: ಸ್ವಯಂ ಪ್ರೆರೀತ ರಕ್ತದಾನ ಶಿಬಿರವನ್ನು ಉದ್ಘಾಟನೆ

ಕುಂದಾಪುರ: ರಕ್ತದಾನ ಎಲ್ಲಾ ದಾನಗಳಿಗಿಂತ ಮಿಗಿಲಾದುದು. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯವೂ ಸುಧಾರಿಸುವುದಲ್ಲದೇ ಇನ್ನೊಂದು ಜೀವವನ್ನು ಉಳಿಸಿದ ಪುಣ್ಯವೂ ಲಭಿಸುತ್ತದೆಎಂದು ಉದ್ಯಮಿ ಸುರೇಶ್ ಡಿ. ಪಡುಕೋಣೆ ಹೇಳಿದರು.

ಕುಂದಾಪುರ ದೇವಾಡಿಗ ಸಮಾಜ ಸೇವಾ ಸಂಘ ಹಾಗೂ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಘಟಕದ ಆಶ್ರಯದಲ್ಲಿ ನಡೆದ ಸ್ವಯಂ ಪ್ರೆರೀತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.  ಕಾರ್ಯಕ್ರಮದ ಅಧ್ಯಕ್ಷತೆನ್ನು ಕುಂದಾಪುರ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ದೇವಾಡಿಗ ವಹಿಸಿದ್ದರು.

ರೆಡ್‌ಕ್ರಾಸ್ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ, ಲಯನ್ಸ್ ಮಣಿಪಾಲದ ಅಧ್ಯಕ್ಷ ಬಿ.ಜಿ. ಮೋಹನ್‌ದಾಸ್, ಕುಂದಾಪು ರೆಡ್‌ಕ್ರಾಸ್ ವೈದ್ಯಾಧಿಕಾರಿ ಎಚ್.ಎಸ್. ಮಲ್ಲಿ, ಮಾಜಿ ಜಿ.ಪಂ ಉಪಾಧ್ಯಕ್ಷ ರಾಜು ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಕುಂದಾಪುರ ದೇವಾಡಿಗ ಸಮಾಜದ ಮಾಜಿ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಕಾರ್ಯಕ್ರಮ ನಿರೂಪಿಸಿದರು. ಉದಯ ಹೇರಿಕುದ್ರು ವಂದಿಸಿದರು.

_MG_2586

Exit mobile version