Site icon Kundapra.com ಕುಂದಾಪ್ರ ಡಾಟ್ ಕಾಂ

ಡಾ| ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ‘ಹುಲಿ ಕುಣಿತ’

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಡಾ| ಬಿ. ಬಿ. ಹೆಗ್ಢೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೇಸಿಐ ಕುಂದಾಪುರ ಸಿಟಿ ಮತ್ತು ಕಿಯೋನಿಕ್ಸ್, ಚರ್ಚ್ ರಸ್ತೆ ಕುಂದಾಪುರ ಇವರ ಸಹಕಾರದೊಂದಿಗೆ ಚೌಡೇಶ್ವರಿ ಟೈಗರ್ಸ್ ಟಿ.ಟಿ. ರಸ್ತೆ ಕುಂದಾಪುರ ಇವರಿಂದ ಹುಲಿವೇಷ ಕುಣಿತ ಪ್ರದರ್ಶನವು ಗುರುವಾರದಂದು ನಡೆಯಿತು.

ಕಾಲೇಜಿನ ಪ್ರಾಚಾರ್ಯರಾದ ಕೆ. ಉಮೇಶ್ ಶೆಟ್ಟಿ, ಜೇಸಿಐ ಸಿಟಿ ಕುಂದಾಪುರದ ಅಧ್ಯಕ್ಷ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಕಾರ್ಯಕ್ರಮ ಪ್ರಾಯೋಜಕರಾದ ಹರ್ಷವರ್ಧನ್ ಶೆಟ್ಟಿ, ಮಾಲಕರು ಕಿಯೋನಿಕ್ಸ್, ಚರ್ಚ್ ರಸ್ತೆ ಕುಂದಾಪುರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಡಾ| ಸೋನಿ, ಜೇಸಿ ವಿಜಯ ಭಂಡಾರಿ, ಜೇಸಿ ರಾಜು ಪೂಜಾರಿ, ಉಪ-ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ ಕಾರ್ಯಕ್ರಮವನ್ನು ಸಂಘಟಿಸಿದ ಲಲಿತಾಕಲಾ ಸಂಘದ ಸಂಯೋಜಕಿ ದೀಪಿಕಾ. ಜಿ. ರವಿನಾ ಸಿ, ಪೂಜಾರಿ, ನಿರ್ಮಲಾ ಬಿ. ಉಪಸ್ಥಿತರಿದ್ದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ ನಿರೂಪಿಸಿದರು.

Exit mobile version