ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮುದ್ಯತಾ ಸಂಸ್ಥೆ ಮತ್ತು ಕಶ್ವಿ ಚೆಸ್ ಸ್ಕೂಲ್ ಕುಂದಾಪುರ ಜಂಟಿ ಆಶ್ರಯದಲ್ಲಿ ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಸಹ ಯೋಗದೊಂದಿಗೆ ಅಂತರ್ ಜಿಲ್ಲಾ ಮಟ್ಟದ ಮುಕ್ತ ಮತ್ತು ಮಹಿಳೆಯರ ವಿಭಾಗದಲ್ಲಿ ರ‍್ಯಾಪಿಡ್ ಚೆಸ್ ಸಮುದ್ಯತಾ ಚದುರಂಗ ಸ್ಪರ್ಧೆ – 2024 ಅ.19 ರಂದು ಕುಂದಾಪುರದ ಪ್ರೆಸಿಡೆಂಟ್ ಕನ್ವೆಷನ್ ಸೆಂಟರ್ ಕ್ರೌನ್ ಹಾಲ್ ತೆಕಟ್ಟೆಯಲ್ಲಿ ನಡೆಯಲಿದೆ.
ಮುಕ್ತ ಮತ್ತು ಮಹಿಳೆಯರ ಪ್ರತ್ಯೇಕ ವಿಭಾಗದಲ್ಲಿ ಚೆಸ್ ಪಂದ್ಯಾವಳಿ ನಡೆಯಲಿದೆ, ಉಡುಪಿ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ಅತ್ಯಧಿಕ ನಗದು ಬಹುಮಾನ (1.25 ಲಕ್ಷ ) ವಿಜೇತರಿಗೆ ನೀಡಲಾಗುವುದು.
ಈ ಪಂದ್ಯಾವಳಿಗೆ ವಿವಿಧ ಜಿಲ್ಲೆಗಳಿಂದ 300 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಶ್ವಿ ಚೆಸ್ ಸ್ಕೂಲ್ ನ ಸ್ಥಾಪಕ ಅಧ್ಯಕ್ಷರಾಗಿರುವ ನರೇಶ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಸರು ನೊಂದಾಯಿಸಲು ಕೊನೆಯ ದಿನಾಂಕ 17th ಅಕ್ಟೋಬರ್. (7899969063)