Kundapra.com ಕುಂದಾಪ್ರ ಡಾಟ್ ಕಾಂ

ದೃಶ್ಯ ಮಾಧ್ಯಮಗಳಿಂದ ಮಾನಸಿಕ ಬಡತನ: ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ

ಕುಂದಾಪುರ: ದೃಶ್ಯ ಮಾಧ್ಯಮಗಳು ನಮ್ಮನ್ನು ಮಾನಸಿಕವಾಗಿ ಬಡವರನ್ನಾಗಿಸುತ್ತಿವೆ. ಇಂದಿನ ಯುವಕರು ಟಿ.ವಿ ಮೊಬೈಲಿನಲ್ಲಿಯೇ ಕಳೆದುಹೋಗುತ್ತಿದ್ದಾರೆ. ಏನನ್ನಾದರೂ ಮಾಡಿ ಪ್ರಸಿದ್ಧಿ ಪಡೆಯುವ ಗೀಳು ಹತ್ತಿಸಿಕೊಂಡಿದ್ದಾರೆ. ಆದರೆ ಪುಸ್ತಕದ ಓದು, ಸಾಹಿತ್ಯ ನಮ್ಮನ್ನು ಶ್ರೀಮಂತಗೊಳಿಸುವುದಲ್ಲದೇ, ಮಾನಸಿಕವಾಗಿಯೂ ಸದೃಡರನ್ನಾಗಿಸುತ್ತದೆ ಎಂದು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಆರ್ಥಿಕ ನಿಯಂತ್ರಕ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಹೇಳಿದರು.

ಅವರು ಕಂದಾವರ ರಘುರಾಮ ಶೆಟ್ಟಿ ಅಭಿನಂದನಾ ಸಮಾರಂಭ ’ಕಂದಾವರ-೮೦’ರಲ್ಲಿ ಅಭಿನಂದನಾ ಗ್ರಂಥ ಕೆಂದಾವರೆ ಬಿಡುಗಡೆಗೊಳಿಸಿ ಮಾತನಾಡಿದರು. ಯಕ್ಷಗಾನ ಕಲಾವಿದರು, ವೇಷಭೂಷಣ ಸೇರಿದಂತೆ ಎಲ್ಲಾ ಪ್ರಕಾರಗಳ ದಾಲೀಕಣವಾದಾಗ ಅದು ಮುಂದಿನ ಜನಾಂಗ ತಲುಪಿ ತನ್ನ ನಿರಂತರತೆ ಕಾಯ್ದುಕೊಳ್ಳುತ್ತದೆ. ಕಂದಾವರ ರಘುರಾಮ ಶೆಟ್ಟಿಯವರಂತಹ ಪ್ರಸಂಗಕರ್ತರ ಉತ್ಕೃಷ್ಟವಾದ ಸಾಹಿತ್ಯ ಕೃತಿಗಳು ಮುಂದಿನ ಜನಾಂಗಕ್ಕೆ ಬೆಳಕಾಗಬೇಕಿದೆ ಎಂದರು.

ಬಸ್ರುರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೆಶ್ವರ ದೇವಸ್ಥಾನ ಧರ್ಮದರ್ಶಿ ಸೀತಾರಾಮ ಶೆಟ್ಟಿ, ಪೋಲ್ಯ ಉಮೇಶ್ ಶೆಟ್ಟಿ, ಎಂಐಟಿ ಮಣಿಪಾಲದ ಪ್ರಾಧ್ಯಾಪಕ ಎಸ್.ವಿ. ಉದಯಕುಮಾರ್ ಶೆಟ್ಟಿ, ಬಸ್ರೂರು ಶಾರದಾ ಕಾಲೇಜ್ ಪ್ರಾಂಶುಪಾಲ ಪ್ರೊ. ರಾಧಾಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ ಅವರಿಗೆ ಕಂದಾವರ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಕೆಂದಾವರೆ ಅಭಿನಂದನಾ ಗ್ರಂಥದ ಸಂಪಾದಕ ತಾರಾನಾಥ ವರ್ಕಾಡಿ ಗ್ರಂಥ ಪರಿಚಯ ಮಾಡಿದರು. ಬಸ್ರೂರು ನಿವೇದಿತಾ ಹೈಸ್ಕೂಲ್ ಮುಖ್ಯೋಪಧ್ಯಾಯ ದಿನಕರ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಪ್ರತಾಪ್ ಶೆಟ್ಟಿ ಹಳ್ನಾಡು ನಿರ್ವಹಿಸಿದರು.

Exit mobile version