Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಮಿಯ್ಯಾಣಿ ಕಾಡಿನತಾರು ಸೂರ್ಯ ಕಂಬಳೋತ್ಸವ ಸಂಪನ್ನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ತಾಲೂಕು ಕಂಬಳ ಸಮಿತಿಯ ಸಹಕಾರದಲ್ಲಿ ಬಿಜೂರು ಗ್ರಾಮದ ಮಿಯ್ಯಾಣಿ ಕಾಡಿನತಾರು ಸೂರ್ಯ ಕಂಬಳೋತ್ಸವ ಸಂಭ್ರಮ ಸಡಗರದಲ್ಲಿ ನೆರವೇರಿತು.

ಪ್ರಥಮದರ್ಜೆ ಗುತ್ತಿಗೆದಾರರಾದ ಗೋಕುಲ್ ಶೆಟ್ಟಿ ಕಂಬಳೋತ್ಸವ ಉದ್ಘಾಸಿದರು. ರಘುರಾಮ ಶೆಟ್ಟಿ ಬಿಜೂರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಕಂಬಳದ ಆಯೋಜಕ ಸಂತೋಷ ಪೂಜಾರಿ ಕಾಡಿನತಾರು, ಬೈಂದೂರು ವಲಯ ಕಂಬಳ ಸಮಿತಿಯ ಉಪಾಧ್ಯಕ್ಷ ಪರಮೇಶ್ವರ ಭಟ್ ಬೋಳಂಬಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಹಿರಿಯ ಕಂಬಳ ಓಟಗಾರರಾದ ಹೆರಿಯ ದೇವಾಡಿಗ ಮೆಲ್‌ಮಿಯಾಣಿ, ಉದಯ ದೇವಾಡಿಗ ಮೇಲ್‌ಮಿಯಾಣಿ, ಆನಂದ ಪೂಜಾರಿ ಹರ್ಲಮಕ್ಕಿ, ಚಂದ್ರ ದೇವಾಡಿಗ ಮೇಲ್‌ಮಿಯಾಣಿ ಹಾಗೂ ವಾಸು ದೇವಾಡಿಗ ಮೇಲ್‌ಮಿಯಾಣಿ ಅವರನ್ನು ಸನ್ಮಾನಿಸಲಾಯಿತು.

ಕಂಬಳೋತ್ಸವದಲ್ಲಿ ಸುಮಾರು 65ಕ್ಕೂ ಹೆಚ್ಚು ಜೊತೆ ಕೋಣಗಳು ಪಾಲ್ಗೊಂಡಿದ್ದವು.

ಫಲಿತಾಂಶ:
ಕಂಬಳೋತ್ಸವದಲ್ಲಿ ಹಗ್ಗ ಅತೀ ಕಿರಿಯ, ಹಗ್ಗ ಕಿರಿಯ, ಹಗ್ಗ ಹಿರಿಯ  ಹಾಗೂ ಹಲಗೆ ಮುಕ್ತ ಎಂದು ವಿಂಗಡಿಸಿ ವಿಜೇತ ಕೋಣಗಳಿಗೆ ಬಹುಮಾನ ವಿತರಿಸಲಾಯಿತು.

ಹಗ್ಗ ಅತೀ ಕಿರಿಯ ವಿಭಾಗ:
ಸ್ವಾಮಿ ಧಾಮ್ ಹೊಳೆಕಟ್ಟು ಪ್ರಥಮ, ಬೈಂದೂರು ಕೆರ್ಗಾಲ್ ಹೊಸಮನೆ ಶೌರ್ಯ ದೇವಾಡಿಗ ದ್ವಿತೀಯ ಹಾಗೂ ಸಂಕು ಮಹಾಸತಿ ಸಂಕದಗುಂಡಿ ಶಿರೂರು ತೃತೀಯ ಸ್ಥಾನ ಪಡೆಯಿತು.

ಹಗ್ಗ ಕಿರಿಯ:
ಸ್ವಾಮಿ ಧಾಮ ಹೊಳೆಕಟ್ಟು ಕುಂಭಾಸಿ ಪ್ರಥಮ, ಹೆಚ್.ಎನ್. ನಿವಾಸ್ ಭಟ್ಕಳ್ ದ್ವಿತೀಯ  ಸ್ಥಾನ ಪಡೆಯಿತು.

ಹಗ್ಗ ಹಿರಿಯ:
ವೆಂಕಟ ಪೂಜಾರಿ ಸಸಿಹಿತ್ಲು ಬೈಂದೂರು ಅವರ ಕೋಣ ಪ್ರಥಮ ಸ್ಥಾನ, ದಿಶಾ ಶ್ರೇಯಸ್ ಅಚಿಂತ್ಯ ರಾಜೇಶ್ ದೇವಾಡಿಗ ಮಿಯ್ಯಾಣಿ ಕಂಚಿಕಾನ್ ದ್ವಿತೀಯ ಸ್ಥಾನ ಪಡೆಯಿತು.

ಹಲಗೆ ಮುಕ್ತ:
ಪವನ್ ಹರ್ಷ ಕುಮಾರ್ ಮೊಳೆಬೈಲು ಗಂಗೆಬೈಲು ಕೊಡೇರಿ ಪ್ರಥಮ ಸ್ಥಾನ ಪಡೆಯಿತು, ತೆಕ್ಕೆಟ್ಟೆ ಮೇಲಗುಡ್ಡೆ ಮನೆ ಆನಂದ್ ದೇವಾಡಿಗ ಅವರ ಕೋಣ ದ್ವಿತೀಯ ಸ್ಥಾನ ಪಡೆಯಿತು.

Exit mobile version