ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಹಾಗೂ ಪ್ರಮೋದ ಮಧ್ವರಾಜ್ ಅಭಿಮಾನಿ ಬಳಗ ಕುಂದಾಪುರ ಇವರ ಸಹಕಾರದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಗುರುವಾರದಂದು ಗೋ ಡಾ. ನರಸಿಂಹ ಶೆಟ್ಟಿ ಯಡ್ತರೆ ಸಭಾ ಮಂಚ್ ರೋಟರಿ ಕ್ಲಬ್ ಸಭಾಭವನದಲ್ಲಿ ಜರಗಿತು.
ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೋಟ ಗೀತಾನಂದ ಪೌಂಡೇಶನ್ ಪ್ರವರ್ತಕರಾದ ಆನಂದ್ ಸಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಪುರಸಭಾ ಅಧ್ಯಕ್ಷರಾದ ಮೋಹನ್ ದಾಸ್ ಶೆಣೈ, ಸರಕಾರಿ ಆಸ್ಪತ್ರೆಯ ಡಾ. ನಾಗೇಶ್ ಫಿಶಿಯನ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಭಾಪತಿಗಳಾದ ಜಯಕರ ಶೆಟ್ಟಿ, ಆನಗಳ್ಳಿ ಚೆನ್ನಕೇಶವ ಭಟ್ ವೇದಮೂರ್ತಿ ಗಾಯತ್ರಿ , ಹಂಗಳೂರು ಲಯನ್ ಕ್ಲಬ್ ಅಧ್ಯಕ್ಷರಾದ ರೋವನ್ ಡಿಕೋಸ್ಟಾ, ಸದಾನಂದ ಬಳ್ಕೂರು, ಸುನೀಲ್ ಶೆಟ್ಟಿ ಹೇರಿಕುದ್ರು, ಭಾಸ್ಕರ ಬಿಲ್ಲವ ಹೇರಿಕುದ್ರು ಹಾಗೂ ರಕ್ತದಾನ ಶಿಬಿರದ ಮುಖ್ಯ ರೂವಾರಿಗಳಾದ ಶರತ್ ಕಾಂಚನ್ ಆನಗಳ್ಳಿ ಮತ್ತು ಪ್ರಶಾಂತ್ ತಲ್ಲೂರು ಉಪಸ್ಥಿತರಿದ್ದರು.
ನಾಗರಾಜ ಭಟ್ಕಳ್ ನಿರೂಪಿಸಿದರು. ಅಖಿಲ ಹೆಗ್ಡೆ ವಂದಿಸಿದರು. ಶಿಬಿರದಲ್ಲಿ 130 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.