Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ ಜಾತ್ರೆ: ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಪೂರ್ವಬಾವಿ ಸಭೆ

ಬೈಂದೂರು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ವಾರ್ಷಿಕ ಜಾತ್ರೆಯು ಡಿಸೆಂಬರ್ ೨೬ರಂದು ನಡೆಯಲಿದ್ದು, ಶಾಸಕ ಕೆ. ಗೋಪಾಲ ಪೂಜಾರಿ ನೇತೃತ್ವದಲ್ಲಿ  ದೇವಳದ ಸಭಾಭವನದಲ್ಲಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆಯಿತು.

ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಪ್ರದಾಯದಂತೆ ನಡೆಸಿಕೊಂಡು ಬರುವುದರೊಂದಿಗೆ, ಜಾತ್ರೆಯು ಶಿಸ್ತುಬದ್ದವಾಗಿ ನಡೆಸಲು ಸ್ವಯಂ ಸೇವಕರನ್ನು ಬಳಸಿಕೊಳ್ಳಬೇಕು ಅದಕ್ಕಾಗಿ ಸ್ಥಳಿಯ ಮಿನೂಗಾರ ಸಂಘಟನೆ, ಸ್ವಸಹಾಯ ಗುಂಪುಗಳು ಹಾಗೂ ಯುವಕಮಂಡಳಿಗಳ ಸದಸ್ಯರ ಸೇವೆಗಳನ್ನು ಬಳಸಿಕೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದರು. ಮುಖ್ಯವಾಗಿ ಕುಡಿಯುವ ನೀರು, ಸ್ವಚ್ಚತೆ ಹಾಗೂ ಸುವ್ಯವಸ್ಥೆಗೆ ಹೆಚ್ಚು ಪಾಮುಖ್ಯತೆ ನೀಡುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನಿರ್ದೆಶನ ನೀಡಿದರು, ಜಾತ್ರಾ ಮಹೋತ್ಸವವು ಯಶಸ್ವಿಯಾಗಿ ನಡೆಯಲು ಹಾಗೂ ದೇವಳದ ಕೆರೆಯ ಪುನರನಿರ್ಮಾಣ ಹಾಗೂ ರಥಬೀದಿ ಕಾಂಕ್ರೇಟ್ ರಸ್ತೆ ನಿರ್ಮಿಸಿ ಕೊಡುವ ಸಂಪೂರ್ಣ ಭರವಸೆಯನ್ನು ಸಹ ಶಾಸಕರು ನೀಡಿದರು.

ಉಪ್ಪುಂದ ಗ್ರಾಪಂ ಅಧ್ಯಕ್ಷೆ ದುಗ್ಗಮ್ಮ, ಶಿಕ್ಷಣ ಮತ್ತು ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ದೇವಳದ ಪ್ರದಾನ ಅರ್ಚಕ ಪ್ರಕಾಶ ಉಡುಪ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಬಿಜೂರು, ವಿಶೇಷ ತಹಶೀಲ್ದಾರ ಕಿರಣ್ ಗೌರಯ್ಯ, ಗ್ರಾಪಂ ಸದಸ್ಯರುಗಳಾದ ಐ ನಾರಾಯಣ, ಮಂಜು ದೇವಾಡಿಗ ಅರೆಹಾಡಿ, ಮೋಹನಚಂದ್ರ, ನಾಗಮ್ಮ ದೇವಾಡಿಗ, ನಾಗರಾಜ ಶೇಟ್, ಯು ಸಂದೇಶ ಭಟ್, ವೇದಿಕೆಯಲ್ಲಿ ಉಪಸ್ಥಿತರಿದ್ದರು, ಊರಿನ ಹಿರಿಯರಾದ ಗೋಪಾಲ ಶೆಟ್ಟಿ, ದೀಟಿ ಸೀತಾರಾಮ ಮಯ್ಯ, ಮೋಹನ ಪೂಜಾರಿ, ಮಂಜುನಾಥ ದೇವಾಡಿಗ ಕೋಟೆಬೆಟ್ಟು, ರಾಮ ದೇವಾಡಿಗ, ವೆಂಕಟ್ರಮಣ ಭಟ್, ಶೇಷಪ್ಪ ಅಡಿಗ, ಪಿಡಿಓ ಹರೀಶ ಮೊಗವೀರ, ಮೆಸ್ಕಾಂ ಅಧಿಕಾರಿಗಳು, ಆರೋಗ್ಯ, ದೂರವಾಣಿ, ನೀರಾವರಿ, ಪೋಲಿಸ್ ಇಲಾಖೆ, ಕಂದಾಯ ಅಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು, ದೇವಳದ ಕಾರ್ಯನಿರ್ವಹಣಾಧಿಕಾರಿ ಟಿ.ಜಿ.ಸುಧಾಕರ ಪ್ರಾಸ್ತಾವಿಸಿ, ಎಲ್ಲಾ ಜನಪ್ರತಿನಿಧಿಗಳ, ಇಲಾಖಾ ಅಧಿಕಾರಿಗಳ, ಜನತೆಯ ಪೂರ್ಣ ಸಹಕಾರ ಬೇಕೆಂದು ಹೇಳಿದರು.

-ಜನನಿ ಉಪ್ಪುಂದ

Exit mobile version