Kundapra.com ಕುಂದಾಪ್ರ ಡಾಟ್ ಕಾಂ

ಕುಂಭಾಶಿ ಡಿವೈಡರ್ ತೆರವು ವಿರೋಧಿಸಿ ನಾಗರಿಕರ ಬೃಹತ್ ಪ್ರತಿಭಟನೆ.

ಕುಂದಾಪುರ: ಕುಂಭಾಶಿ ರಾಷ್ಟ್ರೀಯ ಹೆದ್ದಾರಿಯ ಕರ್ನಾಟಕ ಬ್ಯಾಂಕ್ ಬಳಿ ಇದ್ದ ಡಿವೈಡರ್ ಬಂದ್ ಮಾಡಿ ಸ್ವಾಗತ ಗೋಪುರದ ಬಳಿ ನಿರ್ಮಿಸಿರುವುದನ್ನು ವಿರೋಧಿಸಿ, ಕೊರವಡಿ, ಕುಂಭಾಶಿ, ಗೋಪಾಡಿ, ಬೀಜಾಡಿ ಗ್ರಾಮಸ್ಥರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಲಾಭಿ ಮತ್ತು ಒತ್ತಡಕ್ಕೆ ಮಣಿದು ಕುಂಭಾಶಿ ಕರ್ನಾಟಕ ಬ್ಯಾಂಕ್ ಬಳಿ ಇದ್ದ ಡಿವೈಡರ್ ಕಟ್ ಮಾಡಿದ್ದರಿಂದ ಕರಾವಳಿ ಭಾಗದ ಜನರಿಗೆ ಸಂಚಾರ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಆಕ್ರೋಶಿತಗೊಂಡಿರುವ ಗ್ರಾಮಸ್ಥರು ಕುಂಭಾಶಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಸರ್ವಿಸ್ ರಸ್ತೆ ಕೂಡಾ ಮಾಡದೆ ಏಕಾಏಕಿ ಹೆದ್ದಾರಿ ಅಧಿಕಾರಿಗಳು ಡಿವೈಡರ್ ಕಟ್ ಮಾಡಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ಸ್ವಾಗತ ಗೋಪುರ ಬಳಿ ಡಿವೈಡರ್ ನಿರ್ಮಿಸಿದ್ದು ಇದರಿಂದ ಅಪಘಾತಗಳು ಹೆಚ್ಚಿ, ಇದೂವರಗೆ ನಾಲ್ವರು ಪ್ರಾಣ ಕಳೆದುಕೊಂಡಿದ್ದು, ಐದು ಜನ ಗಂಭಿರ ಗಾಯಗೊಂಡಿದ್ದಾರೆ. ಕರ್ನಾಟಕ ಬ್ಯಾಂಕ್ ಸಮೀಪಿ ಪ್ರದೇಶ ಸರಕ್ಷಿತವಾಗಿದ್ದು ಅಲ್ಲಿ ಡಿವೈಡರ್ ನಿರ್ಮಿಸಬೇಕು. ಜನರ ಭಾವನೆಗೆ ಬೆಲೆಕೊಟ್ಟು ಕರ್ನಾಟಕ ಬ್ಯಾಂಕ್ ಬಳಿ ಡಿವೈಡರ್ ನಿರ್ಮಿಸದಿದ್ದರೆ ಶಾಂತವಾಗಿ ನಡೆಯುತ್ತಿರುವ ಪ್ರತಿಭಟನೆ ಉಗ್ರರೂಪ ತಾಳಲಿದೆ ಎಂದು ನಾಗರಿಕರು ಎಚ್ಚರಿಸಿದ್ದಾರೆ.

Protest for removing Kumbashi divider  (1)

Exit mobile version