Kundapra.com ಕುಂದಾಪ್ರ ಡಾಟ್ ಕಾಂ

ಶಿಕ್ಷಕ ಗಣೇಶ್‌ ಪೂಜಾರಿ ಅವರಿಗೆ ಶಿಕ್ಷಣ ಸೇವಾರತ್ನ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಇತ್ತೀಚಿಗೆ ಬೆಂಗಳೂರಿನ ಇಂಡೋ ಗ್ಲೋಬ್‌ ಪಿಯು ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ -2024ರಲ್ಲಿ ಶಿಕ್ಷಕ ಗಣೇಶ ಪೂಜಾರಿ ಅವರಿಗೆ ಶಿಕ್ಷಣ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸೂರ್ಯ ಫೌಂಡೇಶನ್‌ ಬೆಂಗಳೂರು, ಸ್ಪಾರ್ಕ್‌ ಅಕಾಡೆಮಿ ಬೆಂಗಳೂರು ವತಿಯಿಂದ ಇಂಡೋಗ್ಲೋಬ್‌ ಇನ್ಸಿಟ್ಯೂಷನ್ಸ್‌ ಬೆಂಗಳೂರು ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್‌ ಮೈಸೂರು ಸಹಕಾರದೊಂದಿಗೆ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ಆಯೋಜಿಸಲಾಗಿತ್ತು.

ಈ ವೇಳೆ ಕರ್ನಾಟಕ ಶಿಕ್ಷಕರ ಪ್ರತಿಭಾ ಪರಿಷತ್‌ ಸಂಸ್ಥಾಪಕ  ಅಧ್ಯಕ್ಷರಾದ ಪಿ. ಮಹೇಶ್‌, ಬೆಂಗಳೂರು ಇಂಡೋಗ್ಲೋಬ್‌ ಇನ್ಸಿಟ್ಯೂಷನ್ಸ್‌ ಕಾರ್ಯದರ್ಶಿಯಾದ ಸಂಗೀತ, ಇಂಡೋಗ್ಲೋಬ್‌ ಇನ್ಸಿಟ್ಯೂಷನ್ಸ್‌ ಹೆಸರುಘಟ್ಟ ಚೇರ್ಮನ್‌ ಟಿ.ಎಂ ಗೌಡ ಮತ್ತು ಬೆಂಗಳೂರು ಸೂರ್ಯ ಫೌಂಡೇಶನ್‌ ಅಧ್ಯಕ್ಷರಾದ ಸೋಮೇಶ್‌ ನವೋದಯ ಇನ್ನಿತರು ಉಪಸ್ಥಿತರಿದ್ದರು.

Exit mobile version