Site icon Kundapra.com ಕುಂದಾಪ್ರ ಡಾಟ್ ಕಾಂ

ಸಮುದ್ಯತಾ ಚದುರಂಗೋತ್ಸವ – ಅಂತರ್ ಜಿಲ್ಲಾ ರ‍್ಯಾಪಿಡ್ ಚೆಸ್ ಪಂದ್ಯಾವಳಿ 2024 ಸಂಪನ್ನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಸಮುದ್ಯತಾ ಚದುರಂಗೋತ್ಸವ ಅಂತರ್ ಜಿಲ್ಲಾ ಪುರುಷರು ಮತ್ತು ಮಹಿಳೆಯರ ರ‍್ಯಾಪಿಡ್ ಚೆಸ್ ಪಂದ್ಯಾವಳಿ 2024ರ ಸಮಾರೋಪ ಸಮಾರಂಭದಲ್ಲಿ ತೆಕ್ಕಟ್ಟೆಯ ಸಮುದ್ಯತಾ ಸಭಾಂಗಣದಲ್ಲಿ ಜರುಗಿತು.

ಈ ವೇಳೆ ಸಮುದ್ಯತಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಯೋಗೇಂದ್ರ ತಿಂಗಳಾಯ, ಪ್ರೆಸಿಡೆಂಟ್ ಗ್ರೂಪ್ ಬಹರೈನ್‌ನ ಸಿಇಒ ಅಬ್ದುಲ್ ಸತ್ತಾರ್, ಶಂಕರನಾರಾಯಣ ಸಬ್ ಇನ್ಸ್ಪೆಕ್ಟರ್ ನಾಸಿರ್ ಹುಸೇನ್, ಕಟೀಲೇಶ್ವರಿ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಚ್. ಪ್ರಕಾಶ್ ಶೆಟ್ಟಿ, ಸಲೀಮ್ ಬೇಗಿ, ಇಂಟರ್ನ್ಯಾಷನಲ್ ಆರ್ಬಿರ್ಟರ್ ಬೆಂಗಳೂರು ಉಪಸ್ಥಿತರಿದ್ದರು.

ಪಂದ್ಯಾವಳಿಯಲ್ಲಿ ಸುಮಾರು 220 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಶ್ವಿ ಚೆಸ್ ಸ್ಕೂಲ್‌ನ ವ್ಯವಸ್ಥಾಪಕರಾದ ನರೇಶ್ ರಾವ್, ಕಶ್ವಿ ಚೆಸ್ ಸ್ಕೂಲ್ ನ ಸಲಹೆಗಾರರಾದ ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕಶ್ವಿ ಚೆಸ್ ಸ್ಕೂಲ್ ಕಾರ್ಯದರ್ಶಿಯಾದ ಪುರುಷೋತ್ತಮ್ ಕಾಮಾತ್ ಅವರು ಕಾರ್ಯಕ್ರಮ ನಿರೂಪಿಸಿದರು.

ಮಹಿಳೆಯರ ವಿಭಾಗದಲ್ಲಿ ಪ್ರಸಿದ್ಧಿ ಭಟ್ ಮೈಸೂರು ಪ್ರಥಮ ಸ್ಥಾನವನ್ನು ಪಡೆದಿದ್ದು ಹಾಗೆ ಪುರುಷರ ವಿಭಾಗದಲ್ಲಿ ಅಜಿತ್ ಎಂ. ಪಿ. ಮೈಸೂರು ಇವರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಈ ಪಂದ್ಯಾವಳಿಯಲ್ಲಿ 1.25 ಸಾವಿರ ನಗುದು ಬಹುಮಾನಗಳೊಂದಿಗೆ ಆಕರ್ಷಕ ಟ್ರೋಫಿಗಳನ್ನು ನೀಡಲಾಗಿತ್ತು.

Exit mobile version