Site icon Kundapra.com ಕುಂದಾಪ್ರ ಡಾಟ್ ಕಾಂ

ಅಂಗನವಾಡಿ ಸಹಾಯಕಿ‌ ದಾರು ದೇವಾಡಿಗ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬಿಜೂರು ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗನವಾಡಿ ಸಹಾಯಕಿ ದಾರು ದೇವಾಡಿಗ ಅವರನ್ನು ಸನ್ಮಾನಿಸಲಾಯಿತು ಹಾಗೂ ಅಂಗನವಾಡಿ ಮಕ್ಕಳಿಗೆ ಬಹುಮಾನ ಕಾರ್ಯಕ್ರಮ ನಡೆಸಲಾಯಿತು.

ಮುಖ್ಯ ಅತಿಥಿಯಾಗಿ ಬಾಲ ವಿಕಾಸ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಗಿರೀಶ್ ಶ್ಯಾನುಭಾಗ, ಸಂದೇಶ್ ಭಟ್, ಸುಬ್ರಹ್ಮಣ್ಯ ಖಾರ್ವಿ, ನಾಗಪ್ಪ ದೇವಾಡಿಗ, ಮಹಾಬಲೇಶ್ವರ, ಮಹಾಲಕ್ಷ್ಮಿ, ಪಾರ್ವತಿ ಕೆ. ಪೂಜಾರಿ, ದೀಪಾ,  ಆಶಾ ಕಾರ್ಯಕರ್ತೆ ಗುಲಾಬಿ, ಅಂಗನವಾಡಿ ಕಾರ್ಯಕರ್ತೆ ಸುಶೀಲಾ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಕ್ಕಳ ಪೋಷಕರು, ಸ್ತ್ರೀ ಶಕ್ತಿ ಸದಸ್ಯರು, ಊರ ನಾಗರಿಕರು ಕಾರ್ಯಕ್ರಮ ನೆರವೇರಿಸಿಕೊಟ್ಟರು. ಸತ್ಯನಾರಾಯಣ್ ಶೇಟ್  ಕಾರ್ಯಕ್ರಮಕ್ಕೆ ಪುಷ್ಪವನ್ನು ಒದಗಿಸಿದರು. ಶ್ರೀರಾಮ್ ಹೋಟೆಲ್ ಮಾಲಕರಾದ ನಂದೀಶ್ ದೇವಾಡಿಗ ಅವರು ಕಾರ್ಯಕ್ರಮಕ್ಕೆ ಲಘು ಉಪಹಾರ ಒದಗಿಸಿದರು.

Exit mobile version