Kundapra.com ಕುಂದಾಪ್ರ ಡಾಟ್ ಕಾಂ

ಎಸ್.ಕೆ.ಪಿ.ಎ ಮುದ್ದುಕಂದ ಛಾಯಾಚಿತ್ರ ಸ್ಪರ್ಧೆ: ಆದ್ಯಾ ಜೋಯಿಸ್ ಪ್ರಥಮ, ಪರಿಣ್ಯ ದ್ವಿತೀಯ

ಕುಂದಾಪುರ: ಸೌತ್ ಕೆನರಾ ಪೊಟೋಗ್ರಾಫರ್ಸ್ ಅಸೋಸಿಯೇಶನ್ ಕುಂದಾಪುರ ವಲಯ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಮುದ್ದುಕಂದ ಛಾಯಾಚಿತ್ರ ಸ್ಪರ್ಧೆ ಬಹುಮಾನ ವಿತರಣೆ ಕುಂದಾಪುರ ಅಕ್ಷತಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಆದ್ಯಾ ಜೋಶಿ ಪ್ರಥಮ, ಪರಿಣ್ಯ ದ್ವಿತೀಯ ಮತ್ತು ಪ್ರಾಪ್ತಿ ನೆಲ್ಲಿ ತೃತೀಯ ಹಾಗೂ ವಿಜಯ ಶೆಣೈ, ಆರ್ಯನ್, ಪ್ರಥ್ಯೂಸ್ ಶೆಟ್ಟಿ ಸಮಾಧಾನಕರ ಬಹುಮಾನ ಪಡೆದರು. ಛಾಯಾಚಿತ್ರಗಾಕಾರರಾದ ಅಶೋಕ್ ಕುಮಾರ್ ಶೆಟ್ಟಿ, ಪ್ರಮೋದ್ ಚಂದನ್, ಉದಯ ಪಡಿಯಾರ್, ಗಣೇಶ್ ಕೆ. ತೀರ್ಪುಗಾರರಾಗಿದ್ದರು.

ಫಿಕ್ಸಲ್ ಕ್ರಿಯೇಶನ್ ಸುರೇಶ್ ವಿಜೇತರಿಗೆ ಬಹುಮಾನ ವಿತರಿಸಿದರು. ಸಂಸ್ಥೆ ಗೌರವಾಧ್ಯಕ್ಷ ರಾಬರ್ಟ್ ಡಿಸೋಜಾ, ಉಪಾಧ್ಯಕ್ಷ ದೊಟ್ಟಯ್ಯ ಪೂಜಾರಿ, ರಾಜಾ ಮಠದಬೆಟ್ಟು, ಗಿರೀಶ್ ಚಿತ್ತೂರು, ಕೋಶಾಧಿಕಾರಿ ಚಂದ್ರಕಾಂತ್ ಇದ್ದರು. ಸಂಸ್ಥೆ ಅಧ್ಯಕ್ಷ ಗ್ರೇಶನ್ ಡಯಾಸ್ ಸ್ವಾಗತಿಸಿದರು. ಸುರೇಶ್ ಮೊಳಹಳ್ಳಿ ನಿರೂಪಿಸಿದರು. ಪ್ರಮೋದ್ ಚಂದನ್ ವಂದಿಸಿದರು.

South canara photographers association, Kundapura Muddu kanda photo competition (1)

Exit mobile version