Kundapra.com ಕುಂದಾಪ್ರ ಡಾಟ್ ಕಾಂ

ಸಾಂಸ್ಕೃತಿಕ ಸಂಭ್ರಮಕ್ಕೆ ಸಜ್ಜಾದ ಬಿಂದುಪುರ – ಮೂರು ದಿನಗಳ ಕಾಲ ಬೈಂದೂರು ಉತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸಮೃದ್ಧ ಬೈಂದೂರು, ವಿವಿಧ ಸಂಘ ಸಂಸ್ಥೆ, ತಾಲೂಕು ಆಡಳಿತ ಸಹಭಾಗಿತ್ವದಲ್ಲಿ ಬೈಂದೂರಿನಲ್ಲಿ ಪ್ರಥಮ ಬಾರಿ ಸಾಂಸ್ಕೃತಿಕ ಸಂಭ್ರಮ ಬೈಂದೂರು ಉತ್ಸವ ನ.1, 2, 3ರಂದು ನಡೆಯಲಿದೆ.

 ನ.1ರಂದು ಬೆಳಗ್ಗೆ ತಲ್ಲೂರಿನಿಂದ ಬೈಂದೂರಿಗೆ ಟ್ಯಾಬೊ ಜಾಥಾ ಹೊರಡಲಿದೆ. ಉಪ್ಪುಂದದಿಂದ ಬೈಂದೂರಿಗೆ ಭಜನಾ ಜಾಥಾ ನಡೆಯಲಿದೆ. ಕ್ಷೇತ್ರದ ವಿವಿಧ ಗ್ರಾಪಂ ಹಾಗೂ ಹಲವಾರು ಧಾರ್ಮಿಕ ಕೇಂದ್ರಗಳಿಂದ ಟ್ಯಾಬ್ಲೊ ಸಿದ್ಧಗೊಂಡಿದೆ.

ಧಾರ್ಮಿಕ ಗೋಷ್ಠಿ, ಸಿನಿತಾರ ಸಂಗಮ, ಬೀಚ್ ಉತ್ಸವ, ಮೇಘನಾದ, ಸಾಂಸ್ಕೃತಿಕ ವೈಭವ, ಕಂಬಳ, ಗೊಂಬೆಯಾಟ, ಯಕ್ಷಗಾನ, ಆರೋಗ್ಯ ಮೇಳ, ರಂಗಗೀತೆ, ನೃತ್ಯೋತ್ಸವ, ಗಾನಲೋಕ, ಲೈವ್ ಸಂಗೀತ ಹಬ್ಬ, ಜಾದೂಲೋಕ, ಯೋಗ, ಭರತನಾಟ್ಯ, ಗೆಜ್ಜೆನಾದ, ಜಾಂಬೂರಿ, ಟ್ಯಾಬ್ಲೊ ಮೇಳ, ದೇಹದಾರ್ಡ್ಯ, ಪ್ರದರ್ಶನ, ನಾದನೂಪುರ, ಮೀನುಗಾರಿಕೆ, ಕೃಷಿ, ವೈದ್ಯರು, ವಕೀಲರು, ಬ್ಯಾಂಕಿಂಗ್, ಕೈಗಾರಿಕೆ, ಪ್ರವಾಸೋದ್ಯಮ, ಸಹಕಾರಿ ಕ್ಷೇತ್ರ ಸೇರಿ ವಿವಿಧ ಗೋಷ್ಠಿ ನಡೆಯಲಿದೆ.

ಜನಪದ ಹಬ್ಬ, ಗೋಪೂಜೆ, ದೀಪ ವೈಭವ, ಸ್ಕೂಬಾಡೈವ್, ಆಹಾರ ಮೇಳ, ಕಾರ್ಟೂನ್ ಹಬ್ಬ, ಮನೋರಂಜನಾ ಪಾರ್ಕ್, ಕರಕುಶಲ ಮೇಳ, ವಿಜ್ಞಾನ ಮೇಳ, ಶಿಕ್ಷಣ ಮೇಳ ಮುಂತಾದವುಗಳು ನಡೆಯಲಿವೆ. ಅದ್ದೂರಿ ಉತ್ಸವಕ್ಕೆ ಈಗಾಗಲೇ ಬಿಂದುಪುರ ಸಿದ್ದಗೊಂಡಿದೆ.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮೀ ಹೆಬ್ಬಾಳ್ಳರ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಮೀನುಗಾರಿಕೆ ಸಚಿವ ಎಸ್.ಮಂಕಾಳ ವೈದ್ಯ, ಸಂಸದರಾದ ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗ್ಡೆ ಕಾಗೇರಿ, ಕ್ಯಾಪ್ಟನ್ ಬೃಜೇಶ್ ಚೌಟ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಕೆ.ಪ್ರತಾಪಚಂದ್ರ ಶೆಟ್ಟಿ, ಬನ್ನೂರು ಅಪ್ಪಣ್ಣ ಹೆಗ್ಡೆ, ಬಿ.ಎಂ.ಸುಕುಮಾರ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.

Exit mobile version