Kundapra.com ಕುಂದಾಪ್ರ ಡಾಟ್ ಕಾಂ

ಜ್ವರದಿಂದ 4 ತಿಂಗಳಿನ ಹಸುಗೂಸು ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ನಾಗರಮಕ್ಕಿ ನಿವಾಸಿ ಸಾಧು (35) ಎಂಬವರ 4 ತಿಂಗಳ ಗಂಡು ಮಗು ಹರ್ಷಿತ್‌ಗೆ ಜ್ವರ ಬಂದು ಗುರುವಾರ ಮೃತಪಟ್ಟಿದೆ.

ಮಗುವಿಗೆ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಮಕ್ಕಳ ತಜ್ಞರಿಗೆ ತೋರಿಸಿ ಚಿಕಿತ್ಸೆ ನೀಡಲಾಗಿತ್ತು. ಸುಮಾರು ತಡರಾತ್ರಿ 1.30ರ ವಾಂತಿಬೇಧಿಯಾಗಿದ್ದು, ಕೂಡಲೆ ಚಿಕಿತ್ಸೆಯ ಬಗ್ಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version