Site icon Kundapra.com ಕುಂದಾಪ್ರ ಡಾಟ್ ಕಾಂ

ನ.10ರಂದು ಮಣಿಪಾಲದಲ್ಲಿ ಗಿರಿಜಾ ಸರ್ಜಿಕಲ್ಸ್‌ ಸಂಸ್ಥೆಯ 5ನೇ ಮಳಿಗೆ ಶುಭಾರಂಭ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಗುಣಮಟ್ಟದ ವೈದ್ಯಕೀಯ ಪರಿಕರಗಳಿಗೆ ಹೆಸರಾದ ‘ಗಿರಿಜಾ ಸರ್ಜಿಕಲ್ಸ್’ ಇದರ 5ನೇ ಮಳಿಗೆಯ ಉದ್ಘಾಟನಾ ಸಮಾರಂಭವು ನ.10ರ ಭಾನುವಾರ ಬೆಳಿಗ್ಗೆ 10.30ಕ್ಕೆ ಮಣಿಪಾಲ ಕೆಎಂಸಿ ಆಸ್ಪತ್ರೆ ಎದುರಿನ ವಾಣಿಜ್ಯ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.

ಡಾ. ಟಿ.ಎಂ.ಎ ಪೈ ಫೌಂಡೇಶನ್‌ ಅಧ್ಯಕ್ಷರಾದ ಟಿ. ಅಶೋಕ್‌ ಪೈ. ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿವಿಧ ಅತಿಥಿ ಗಣ್ಯರು ಜೊತೆಯಾಗಲಿದ್ದಾರೆ.

ಕಡಿಮೆ ದರ, ಗುಣಮಟ್ಟದ ಪರಿಕರ, ಆಯ್ಕೆಗೆ ಅವಕಾಶ, ಮೊದಲಾದ ಗ್ರಾಹಕಸ್ನೇಹಿ ಸೇವೆಗಳನ್ನು ಒದಗಿಸುತ್ತಿರುವುದರಿಂದ ಭಟ್ಕಳದಿಂದ ಮಂಗಳೂರು ತನಕದ ಗ್ರಾಹಕರನ್ನು ಹೊಂದಿರುವ ಗಿರಿಜಾ ಸರ್ಜಿಕಲ್ಸ್ ಮಂಗಳೂರಿನಲ್ಲಿ 2 ಮಳಿಗೆ ಉಡುಪಿ ಹಾಗೂ ಕುಂದಾಪುರದಲ್ಲಿ ಈಗಾಗಲೇ ಮಳಿಗೆಗಳನ್ನು ಹೊಂದಿದ್ದು, ಇದೀಗ ಮಣಿಪಾಲದಲ್ಲಿ ನೂತನ ಮಾರಾಟ ಮಳಿಗೆ ಆರಂಭಗೊಳ್ಳುತ್ತಿದೆ. ಮಳಿಗೆಯಲ್ಲಿ ಹೋಲ್‌ಸೆಲ್‌ ದರದಲ್ಲಿ ರಿಟೆಲ್‌ ವಸ್ತುಗಳು ದೊರೆಯಲಿದೆ.

Exit mobile version