Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದ ಬೈಂದೂರು ತಾಲೂಕು ಮುದೂರು ಗ್ರಾಮದ ಶಂಕರಮುಖ ಎಂಬಲ್ಲಿಯ ತೆಲಾಯಿಲ್ ಮನೆಯ ನಿವಾಸಿ ಜಯಕುಮಾರ್ (58) ಎಂಬ ವ್ಯಕ್ತಿಯು ನವೆಂಬರ್ 7 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

ಅವರು 5 ಅಡಿ 4 ಇಂಚು ಎತ್ತರ, ಬಿಳಿ ಮೈಬಣ್ಣ ಕೋಲು ಮುಖ, ಸಾಧಾರಣ ದೃಢಕಾಯ ಶರೀರ ಹೊಂದಿದ್ದು, ತಮಿಳು, ಹಿಂದಿ ಹಾಗೂ ಮಳೆಯಾಳಂ ಭಾಷೆ ಮಾತನಾಡುತ್ತಾರೆ.

ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್‍ ಠಾಣೆ ದೂ.ಸಂಖ್ಯೆ: 08254-258233, 9480805460, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ:08254-251031, 9480805434 ಹಾಗೂ ಕಂಟ್ರೋಲ್ ರೂಂ : 100 ಅಥವಾ 0820- 2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಲ್ಲೂರು ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Exit mobile version