Site icon Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸನ್ಮಾನ

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡ ಗೊಂಬೆಮನೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ನವೆಂಬರ್ ತಿಂಗಳ ಕಾರ್ಯಕ್ರಮದ ಸಂದರ್ಭದಲ್ಲಿ ಕಲಾ ಪ್ರೋತ್ಸಾಹಕ ಉಪ್ಪಿನಕುದ್ರು ವಾಸುದೇವ ಐತಾಳ್ ಮತ್ತು ಗಣೇಶ್ ಐತಾಳ್ ಅವರನ್ನು ಸನ್ಮಾನಿಸಲಾಯಿತು.

 ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕರಾದ ಶ್ರೀಧರ ಹಂದೆ ಮಾತನಾಡಿ 350 ವರ್ಷಗಳ ಹಿನ್ನೆಲೆಯ ಉಪ್ಪಿನಕುದ್ರು ಗೊಂಬೆಯಾಟ ಪರಂಪರೆ ಇಂದು ಆರನೇ ತಲಾಂತರದಲ್ಲಿ ನಡೆಯುತ್ತಿರುವುದೇ ಒಂದು ದಾಖಲೆ. ಇಂತಹ ಒಂದು ಅಕಾಡೆಮಿಯಲ್ಲಿ ಪರಂಪರೆಯ ಮಕ್ಕಳ ಮೇಳಕ್ಕೂ ಅವಕಾಶ ಸಿಕ್ಕಿರುವುದು ಸಂತೋಷದ ವಿಷಯ. ಸಂಪ್ರದಾಯ, ಪರಂಪರೆ ಉಳಿಸಬೇಕಾದವರು ಪ್ರೇಕ್ಷಕರು ಎಂದು ತಿಳಿಸಿದರು.

ತಿಂಗಳ ಗೊಂಬೆ ಮನೆ ಅತಿಥಿಯಾಗಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಅಸೋಸಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ ಗಂಗೊಳ್ಳಿ ಭಾಗವಹಿಸಿದ್ದರು.  ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಸ್ವಾಗತಿಸಿದರು. ಶ್ರೀಧರ ಹಂದೆಯವರ ನೇತೃತ್ವದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದವರಿಂದ ಸಂಪ್ರದಾಯದ ಚೌಕಟ್ಟಿನಲ್ಲಿ ವೀರ ವೃಷಸೇನ ಯಕ್ಷಗಾನ ಬಯಲಾಟ ಜರುಗಿತು. ಮಕ್ಕಳ ಯಕ್ಷಗಾನ ನೆರದ ಪ್ರೇಕ್ಷಕರನ್ನು ರಂಜಿಸಿತು. ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version