Kundapra.com ಕುಂದಾಪ್ರ ಡಾಟ್ ಕಾಂ

ವಂಡ್ಸೆ: ಸವಿನಯ ಸ್ವ-ಸಹಾಯ ಸಂಘದ ದಶಮಾನೋತ್ಸವ

ಕುಂದಾಪುರ: ವಂಡ್ಸೆ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಂಡ್ಸೆ ಒಕ್ಕೊಟದ ಸವಿನಯ ಸ್ವ-ಸಹಾಯ ಸಂಘ 10ನೇ ವರ್ಷದ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಜಿ. ಶ್ರೀಧರ ಶೆಟ್ಟಿ ಅವರು ಮಾತನಾಡಿ, 2005ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವಂಡ್ಸೆಗೆ ಕಾಲಿಟ್ಟಂದಿನಿಂದ ವಂಡ್ಸೆಯಲ್ಲಿ ಬದಲಾವಣೆ ಆರಂಭವಾಗಿದೆ. ಯೋಜನೆಯಿಂದ ಜನಸೇವಾ ಮನೋಭಾವನೆ, ಧಾರ್ಮಿಕ ಪ್ರಜ್ಞೆ ಜಾಗೃತವಾಗಿದೆ. ಆರ್ಥಿಕ ಪ್ರಗತಿ, ಸಮಯಪ್ರಜ್ಞೆ ಮೂಡಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಂಡ್ಸೆ ಒಕ್ಕೂಟದ ಅಧ್ಯಕ್ಷೆ ಜಯಂತಿ ಪಿ.ಶೆಟ್ಟಿ ವಹಿಸಿದ್ದರು. ತಿರುಮಲ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಶ್ವರರಾದ ವಿ.ಕೆ.ಶಿವರಾಮ ಶೆಟ್ಟಿ , ತಾಲೂಕು ಜನ ಜಾಗೃತಿ ಸಮಿತಿ ಸದಸ್ಯರಾದ ತ್ಯಾಂಪಣ್ಣ ಶೆಟ್ಟಿ, ಅರ್ಚಕರಾದ ಗೋಪಾಲಕೃಷ್ಣ ಉಪಾಧ್ಯಾಯ, ರಾಜಶೇಖರ ಉಪಾಧ್ಯಾಯ, ವಂಡ್ಸೆ ಸಿ.ಎ. ಬ್ಯಾಂಕ್ ನಿರ್ದೆಶಕರಾದ ಸಂಜೀವ ಪೂಜಾರಿ, ಜಡ್ಕಲ್ ಗ್ರಾಮ ಪಂಚಾಐತ್ ಪಿ ಡಿ ಓ ಚಂದ್ರ ಪೂಜಾರಿ, ವಲಯ ಮೇಲ್ವಿಚಾರಕರಾದ ನಾಗರಾಜ್ ಸ್ಥಳೀಯ ಸೇವಾ ಪ್ರತಿ ನಿಧಿ ಲಾಲಿ ಸೋಜನ್ ಉಪಸ್ಥಿತರಿದ್ದರು.

ಸಂಘದ ಸದಸ್ಯರಾದ ದಯಾನಂದ ಆಚಾರ್ಯ, ಸುಧಾಕರ ಪೂಜಾರಿ, ದಿವಾಕರ, ಗುರುರಾಜ್ ಗಾಣಿಗ, ಸಂಜೀವ ಭಂಡಾರಿ, ಕೃಷ್ಣ ಪೂಜಾರಿ, ಹರೀಶ್ , ವಾಸು ಜಿ.ನಾಯ್ಕ, ಧರ್ಮಶ್ರೀ ಸ್ವಸಹಾಯ ಸಂಘದ ಸದಸ್ಯರು, ಅಯ್ಯಪ್ಪ ಸ್ವಾಮಿ ಭಕ್ತವೃಂದದವರು ಹಾಜರಿದ್ದರು. ಸವಿನಯ ಸಂಘದ ಸದಸ್ಯ ಗಿರೀಶ್ ಎನ್. ನಾಯ್ಕ ಸ್ವಾಗತಿಸಿ, ಆನಂದ್ ನಾಯ್ಕ ವರದಿ ವಾಚಿಸಿದರು. ರಾಘವೇಂದ್ರ ವಂದಿಸಿದರು. ಶಂಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದ್ದರು.

Exit mobile version